janadhvani

Kannada Online News Paper

ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ನವೆಂಬರ್ 28 ಗುರುವಾರ ರಾತ್ರಿ ಅಲ್ ಮನಮ್ ಸೊಹಾರ್ ಹೊಟೆಲ್ ಫಲಜ್ ನಲ್ಲಿ “ಹಬೀಬ್ (ಸ.ಅ.) ನಮ್ಮ ಜತೆಗಿರಲಿ” ಎಂಬ ಘೋಷ ವಾಕ್ಯ ದೊಂದಿಗೆ ಮೀಲಾದ್ ಜಲ್ಸಾ ಮತ್ತು ಇಹ್ಸಾನ್ ಫೂಟ್ ಪ್ರಿಂಟ್- 2019 ಬಹಳ ಯಶಸ್ವಿಯಾಗಿ ನಡೆಯಿತು.

ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷರಾದ ಸಾದಿಕ್ ಕಾಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ಉದ್ಘಾಟನೆಯನ್ನು
ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ, ಸಂಘಟನಾಧ್ಯಕ್ಷರು ಕೆಸಿಎಫ್ ಒಮಾನ್ ಇವರು ನೆರವೇರಿಸಿದರು. ಎಸ್ಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಹಾಫಿಝ್ ಎಚ್. ಐ. ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ ಇವರು ಹುಬ್ಬುರಸೂಲ್ (ಸ.ಅ) ಮತ್ತು ಇಹ್ಸಾನ್ ಕರ್ನಾಟಕ ಉತ್ತರ ಕರ್ನಾಟಕದಲ್ಲಿ ಇಸ್ಲಾಮಿಕ್ ದ ಅವಾ ಕ್ರಾಂತಿಯನ್ನು ನಡೆಸಿದ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಕ್ರಮದ ಬಗ್ಗೆ ಸ್ಕ್ರೀನ್ ಮುಖಾಂತರ ವಿವರಿಸಿದರು ಹಾಗೂ ಇದೇ ಸಂದರ್ಭದಲ್ಲಿ ಅವರನ್ನು ಝೋನ್ ವತಿಯಿಂದ ಗೌರವಿಸಲಾಯಿತು.

ಮುಸ್ತಫಾ ಸಖಾಫಿ ಮೂಳೂರು, ಸಿರಾಜುದ್ದೀನ್ ಮುಈನಿ ಕೈಕಂಬ ಮತ್ತು ಕೆಸಿಎಫ್ ಸೊಹಾರ್ ಝೋನ್ ಕಾರ್ಯಕರ್ತರಿಂದ ಮೌಲಿದ್ ಹಾಗೂ ಬುರ್ದಾ ಮಜ್ಲಿಸ್ ನಡೆಯಿತು. ಮುಖ್ಯ ಅತಿಥಿಗಳಾಗಿ ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಎಸ್ಎಸ್ಎಫ್ ರಾಷ್ಟ್ರೀಯ ಕೌನ್ಸಿಲ್ ಸದಸ್ಯರಾದ ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ , ಕೆಸಿಎಫ್ ಒಮಾನ್ ಸಾಂತ್ವನ ವಿಭಾಗ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಎರ್ಮಾಳ್ ಇವರು ಭಾಗವಹಿಸಿ ಸಂದರ್ಭೋಚಿತ ವಾಗಿ ಮಾತನಾಡಿದರು.

ಇಹ್ಸಾನ್ ಕರ್ನಾಟಕ ಕೆಸಿಎಫ್ ಒಮಾನ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಕಲಂದರ್ ಬಾವ ಮುಸ್ಲಿಯಾರ್ ಪರಪ್ಪು , ಕೆಸಿಎಫ್ ಒಮಾನ್ ಇದರ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಝೋನ್ ಕೋಶಾಧಿಕಾರಿ ಆರಿಫ್ ಮದಕ, ಫಾರೂಕ್ ಕೆ.ಪುರ, ಹಸನ್ ಬಾವ ಬೈಕಂಪಾಡಿ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೆಸಿಎಫ್ ಸೊಹಾರ್ ಝೋನ್ ಕಾರ್ಯಕಾರಿ ಸಮಿತಿಯ ಸದಸ್ಯರು, ಫಲಜ್ ಸೆಕ್ಟರ್ ಹಾಗೂ ಸೊಹಾರ್ ಸೆಕ್ಟರ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಶ್ರಫ್ ಕುತ್ತಾರ್ ಸ್ವಾಗತಿಸಿ ಶಫೀಕ್ ಎಲಿಮಲೆ ಸುಳ್ಯ ವಂದಿಸಿ ಮುಹಮ್ಮದ್ ಬಶೀರ್ ಕೆ.ಪುರ ಕಾರ್ಯಕ್ರಮ ನಿರೂಪಿಸಿದರು.

error: Content is protected !!
%d bloggers like this: