ಅಬುಧಾಬಿ: ಜನವರಿ 1 ರವರೆಗೆ ಟೋಲ್ ವಿಧಿಸಲಾಗುವುದಿಲ್ಲ

ಅಬುಧಾಬಿ: ಅಬುಧಾಬಿಯಲ್ಲಿನ ಸುಂಕ ಸಂಬಂಧಿತ ವಿವಾಧಗಳು ಕೊನೆಗೊಂಡಿದೆ. 2020 ರ ಜನವರಿ 1 ರವರೆಗೆ ಟೋಲ್ ವಿಧಿಸಲಾಗುವುದಿಲ್ಲ ಮತ್ತು ಪ್ರಯಾಣವು ಉಚಿತವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 15 ರಿಂದ ನಾಲ್ಕು ಟೋಲ್ ಗೇಟ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಈ ಹಿಂದೆ ಘೋಷಿಸಲಾಗಿತ್ತು.

ಟೋಲ್ ಪಾವತಿಸುವ ಮೊದಲು ತಮ್ಮ ವಾಹನಗಳನ್ನು ನೋಂದಾಯಿಸಲು ಮತ್ತು ಪ್ರೀ ಪೇಡ್ ಟೋಲ್ ಖಾತೆಯನ್ನು ತೆರೆಯಲು ತಿಳಿಸಲಾಗಿತ್ತು. ಈ ಬಗ್ಗೆ ಕಳವಳಗಳ ಮಧ್ಯೆ ಸಮಾಧಾನಕರ ಪ್ರಕಟಣೆ ಬಂದಿದೆ. ನೋಂದಣಿ ಸೇರಿದಂತೆ ಸಿದ್ಧತೆಗಳಿಗೆ ಹೆಚ್ಚಿನ ಸಮಯ ಬೇಕಾಗುವ ಕಾರಣ ಗಡುವನ್ನು ವಿಸ್ತರಿಸಲಾಗಿದೆ.

ಶನಿವಾರದಿಂದ ಗುರುವಾರದವರೆಗೆ ಬೆಳಿಗ್ಗೆ 7 ರಿಂದ 9 ರವರೆಗೆ ಮತ್ತು ಸಂಜೆ 5 ರಿಂದ 7 ರವರೆಗೆ 4 ದಿರ್ಹಂ ಟೋಲ್ ಇರುತ್ತದೆ. ಇತರ ಸಮಯಗಳು ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಎರಡು ದಿರ್ಹಮ್‌ಗಳನ್ನು ವಿಧಿಸಲಾಗುತ್ತದೆ. ದಿನಕ್ಕೆ ಗರಿಷ್ಠ ಮೊತ್ತ16 ದಿರ್ಹಂ ಎಂದು ನಿಗದಿಪಡಿಸಲಾಗಿದೆ. ವಾಹನಕ್ಕೆ ತಿಂಗಳಿಗೆ ಪಾವತಿಸಬೇಕಾದ ಗರಿಷ್ಠ ಟೋಲ್ 200 ದಿರ್ಹಂ ಆಗಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!