janadhvani

Kannada Online News Paper

ಅಬುಧಾಬಿ:ಯಾತ್ರಿಕರ ಗಮನಕ್ಕೆ- ಸಾರ್ವಜನಿಕ ಸಾರಿಗೆಯಲ್ಲಿ ಬದಲಾವಣೆ

ಅಬುಧಾಬಿ: ಟ್ರೋಲ್ ಜಾರಿಯಾಗುವ ಹಿನ್ನೆಲೆಯಲ್ಲಿ ಅಬುಧಾಬಿಯ ಸಾರ್ವಜನಿಕ ಸಾರಿಗೆ ಸೇವಾ ರಂಗದಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದೆ. ಹೊಸ ಮಾರ್ಗದ ಬಸ್ ಸೇವೆ ಮತ್ತು ಅಸ್ತಿತ್ವದಲ್ಲಿರುವ ಸೇವೆಗಳ ನವೀಕರಣಗಳೊಂದಿಗೆ, ಎಮಿರೇಟ್ಸ್‌‌ನ ಬಸ್ ಸಾಗಣೆ ಹೆಚ್ಚು ಸುಲಭವಾಗಲಿದೆ. ಇದರ ಭಾಗವಾಗಿ 147 ಹೆಚ್ಚುವರಿ ಸೇವೆಗಳು ಪ್ರಾರಂಭವಾಗಲಿವೆ ಎಂದು ಸಮಗ್ರ ಸಾರಿಗೆ ಕೇಂದ್ರ (ಐಟಿಸಿ) ತಿಳಿಸಿದೆ. ಏಕೀಕೃತ ಟಿಕೆಟ್ ದರದ ಮೊದಲ ಹಂತವೂ ಜಾರಿಯಾಗಲಿದೆ.

ಸುಧಾರಣೆಯು ಉತ್ತಮ ಸಾರಿಗೆ ಅನುಭವವನ್ನು ಒದಗಿಸಲು ಪ್ರಯಾಣಿಕರೊಂದಿಗೆ ನಡೆಸಿದ ಸಮೀಕ್ಷೆಯನ್ನು ಆಧರಿಸಿದೆ ಎಂದು ಐಟಿಸಿಯ ಸಾರ್ವಜನಿಕ ಸಾರಿಗೆಯ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ಹಮದ್ ಅಲ್ ಮುಹೈರಿ ಹೇಳಿದರು. ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಬಸ್ ಪ್ರಯಾಣಿಕರ ದಟ್ಟಣೆ 15% ಹೆಚ್ಚಳಗೊಂಡು 4.82 ಕೋಟಿಗೆ ತಲುಪಿದೆ. ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ ಅದು 4.18 ಕೋಟಿಯಾಗಿತ್ತು.
ಏಕೀಕೃತ ಸಾರಿಗೆ ದರವನ್ನು ಏರ್ಪಡಿಸಲಾಗುವುದರೊಂದಿಗೆ 2 ಬಸ್ಸುಗಳನ್ನು ಹತ್ತಬೇಕಾಗಿ ಬಂದರೂ ಒಂದೇ ಶುಲ್ಕ ವಿಧಿಸಲಾಗುತ್ತದೆ.

ಅಬುಧಾಬಿ, ಅಲ್ ಐನ್ ಮತ್ತು ಅಲ್‌ದಫ್ರಾದಲ್ಲಿನ ಬಸ್ ದರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದು ಟೋಲ್ಗಿಂತ ಮುಂಚಿತವಾಗಿ ಬಸ್ ಸಾರಿಗೆ ಜಾಲವನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿದೆ ಎಂದು ಕಾರ್ಯಾಚರಣೆಯ ನಿರ್ದೇಶಕ ಅತೀಕ್ ಮುಹಮ್ಮದ್ ಅಲ್ ಮಸ್ರೂಯಿ ಹೇಳಿದರು. ಕಡಿಮೆ ಖರ್ಚಿನಲ್ಲಿ ಲಕ್ಷ್ಯ ಸ್ಥಾನವನ್ನು ವೇಗವಾಗಿ ತಲುಪಲು ಸಾಧ್ಯ ಎಂಬ ನಿಟ್ಟಿನಲ್ಲಿ ಖಾಸಗಿ ವಾಹನಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿನವರು ಬಳಸುವರು ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.

ಹೊಸ ಬಸ್ ಮಾರ್ಗಗಳು
ಅಲ್ಫಲಾ ಸಿಟಿ

ಅಲ್ಫಾಲಾ ಸಿಟಿಗೆ ಎಫ್ 1 ಬಸ್ 60 ನಿಮಿಷಗಳ ಅಂತರದಲ್ಲಿ ಸೇವೆ ನಡೆಸಲಿದೆ.

ಖಲೀಫಾ ನಗರ

ಕೆ 01 – ಖಲೀಫಾ ಸಿಟಿ ಸೂಖ್‌ನಿಂದ ಅಲ್ ಫೋರ್ಸಾನ್ ಮೂಲಕ ಖಲೀಫಾ ಸಿಟಿ ಸೂಖ್‌ಗೆ

ಕೆ 02 – ಖಲೀಫಾ ಸಿಟಿ ಸೂಖ್‌ನಿಂದ ಝಾಹಿದ್ ವಿಶ್ವವಿದ್ಯಾಲಯದ ಮೂಲಕ ಖಲೀಫಾ ಸಿಟಿ ಸೂಖ್‌ಗೆ.

ಕೆ 03 – ಅಲ್‌ರಯ್ಯಾನ್‌ನಿಂದ ಖಲೀಫಾ ನಗರದ ಮೂಲಕ ಮುಸ್ದರ್‌ವರೆಗೆ

ಕೆ 04 – ಅಲ್-ಫರ್ಸಾನ್ ಮಸ್ದರ್ ಮೂಲಕ ಅಬುಧಾಬಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ

ಕೆ 05 – ಅದ್ನಾಕ್ ಶಾಲೆಯಿಂದ ಖಲೀಫಾ ಸಿಟಿ ಸೂಖ್‌ನಿಂದ ಇತಿಹಾದ್ ರೆಸಿಡೆನ್ಸಿ ವರೆಗೆ.

ಎಕ್ಸ್‌ಪ್ರೆಸ್ ಮಾರ್ಗ

ಎಕ್ಸ್ 2 ಮಾರ್ಗವನ್ನು ಇನ್ನು ಮುಂದೆ 161 ಎಂದು ಕರೆಯಲಾಗುತ್ತಿದ್ದು, ಸೇವೆಯನ್ನು ಖಲೀಫಾ ಸಿಟಿ ಸೂಖ್‌ ವರೆಗೆ ವಿಸ್ತರಿಸಲಾಗಿದೆ. ಖಲೀಫಾ ಸಿಟಿಯಿಂದ ಅಬುಧಾಬಿ ದ್ವೀಪದವರೆಗೆ ಈ ಸೇವೆ 30 ನಿಮಿಷಗಳ ಅಂತರದಲ್ಲಿ ಲಭ್ಯವಾಗಲಿದೆ.

ಎ 19 – ಖಲೀಫಾ ಸಿಟಿಯ ಇತ್ತಿಹಾದ್ ರೆಸಿಡೆನ್ಸಿ ಮಾರ್ಗವಾಗಿ.

ಮುಸಪ್ಪಾ
ಎಂ 01 – ಡೆಲ್ಮಾ ಮಾಲ್‌ನಿಂದ ಮುಸಫ್ಫಾ ಮತ್ತು ಮುಹಮ್ಮದ್ ಬಿನ್ ಝಾಹಿದ್ ಸಿಟಿಗೆ.

ಎಂ 02 – ಮುಸಫ್ಫಾದಿಂದ ಮುಹಮ್ಮದ್ ಬಿನ್ ಝಾಹಿದ್ ಸಿಟಿಗೆ.

ಎಂ 04 / ಎಂ 05- ಮುಸಫ್ಫಾದಿಂದ ಮುಹಮ್ಮದ್ ಬಿನ್ ಝಾಹಿದ್ ನಗರ ಮೂಲಕ ಮಸಿಯದ್ ಮಾಲ್ ವರೆಗೆ.

ಬನಿಯಾಸ್

443 ಅನ್ನು ಮಾರ್ಗ ಬಿ.43 ಆಗಿಯೂ, 445 ಅನ್ನು ಬಿ.45, ಮತ್ತು 447 ಅನ್ನು ಬಿ.47 ಆಗಿ ಬದಲಾಯಿಸಲಾಗಿದೆ.

ಬಿ 47 – ಬನಿಯಾಸ್ ಒಳಭಾಗಕ್ಕೆ ಬಸ್ ಸೇವೆಯು 60 ನಿಮಿಷಗಳ ಅಂತರದಲ್ಲಿ ಚಲಿಸಲಿದೆ.

101 – ಮುಸಫ್ಫಾದಿಂದ ಅಬುಧಾಬಿ ಮಾರ್ಗವಾಗಿ ಅಲ್-ರೀಫ್‌ಗೆ

102 – ಮುಹಮ್ಮದ್ ಬಿನ್ ಝಾಹಿದ್ ಸಿಟಿಯಂದ ಅಬುಧಾಬಿ ಮೂಲಕ ಯಾಸ್ ದ್ವೀಪಕ್ಕೆ

120 – ಮುಹಮ್ಮದ್ ಬಿನ್ ಝಾಹಿದ್ ಸಿಟಿಯಿಂದ ಅಬುಧಾಬಿ ಮೂಲಕ ಸಾದಿಯಾತ್ ದ್ವೀಪಕ್ಕೆ.

121 – ಮುಹಮ್ಮದ್ ಬಿನ್ ಝಾಹಿದ್ ಸಿಟಿಯಿಂದ ಅಬುಧಾಬಿ ಮೂಲಕ ಸಾದಿಯಾತ್ ದ್ವೀಪದಕ್ಕೆ.

170 – ಅಲ್‌ರಾಹ ಬೀಚ್‌ನಿಂದ ಅಬುಧಾಬಿ ಮೂಲಕ ಸಾದಿಯಾತ್ ದ್ವೀಪಕ್ಕೆ

216 – ಖಲೀಫಾ ಸಿಟಿಯಿಂದ ಶಹಾಮಾ ಮೂಲಕ ಅಲ್ ಬಾಹಿಯಾಗೆ

400 – ಅಬುಧಾಬಿ ಮೂಲಕ ಅಲ್-ರಹ್ಬಾದಿಂದ ಮಾಫ್ರಕ್‌ಗೆ

401 – ಬನಿಯಾಸ್‌ನಿಂದ ಅಬುಧಾಬಿ ಮೂಲಕ ಅಲ್-ಶೆಲೈಲಾ

200 – ಬನಿಯಾಸ್‌ನಿಂದ ಅಬುಧಾಬಿ ಮೂಲಕ ಅಲ್ ಸದರ್ ವರೆಗೆ

ಹೊಸ ಬಸ್ ಮಾರ್ಗಗಳು

210, 26, 222, 410, ಬಿ 43, ಬಿ 45, ಬಿ 47, ಎ 18 ಮತ್ತು ಎ 19 ಮಾರ್ಗಗಳಲ್ಲಿ ಅಸ್ತಿತ್ವದಲ್ಲಿರುವ ಬಸ್ಸುಗಳನ್ನು ಬದಲಾಯಿಸಿ, ಹೊಸ ಸೇವೆ ಆರಂಭಗೊಳ್ಳಲಿದೆ. 410 – ಅರ್ಧ ಗಂಟೆ, 404 ಮಾರ್ಗದಲ್ಲಿ 90 ನಿಮಿಷಗಳು ಮತ್ತು 400 ಮತ್ತು 405 ಎಂಬ ಮಾರ್ಗಗಳಲ್ಲಿ 60 ನಿಮಿಷಗಳ ಅಂತರದಲ್ಲಿ ಸೇವೆ ಲಭ್ಯವಾಗಲಿದೆ. ಕ್ಯೂ 3 – ಸಿಟಿ ಬಸ್ ನಿಲ್ದಾಣಗಳಿಗೆ ಸಂಪರ್ಕ ಹೊಂದಿದ ಬಸ್ಸುಗಳು ದಟ್ಟಣೆಯ ಸಮಯದಲ್ಲಿ 6 ನಿಮಿಷಗಳ ಮತ್ತು ದಟ್ಟಣೆ ಇಲ್ಲದ ಸಮಯದಲ್ಲಿ 7 ರಿಂದ 14 ನಿಮಿಷಗಳ ಅಂತರದಲ್ಲಿ ಸೇವೆ ನೀಡಲಿದೆ. 41, 42, 56, 63, 102 ಮತ್ತು 111 ಮಾರ್ಗಗಳಲ್ಲಿ ಸಾಧಾರಣ ದಿನಗಳಲ್ಲಿ 20 ನಿಮಿಷಗಳ ಅಂತರದಲ್ಲಿ ಸೇವೆ ನೀಡಲಿದೆ. ಶುಕ್ರವಾರ ಸಂಜೆ 6.30 ರ ನಂತರ ಈ ಸೇವೆಯು 30 ನಿಮಿಷಗಳ ಅಂತರದಲ್ಲಿ ಲಭ್ಯವಾಗಲಿದೆ.

43 ಖಲೀಫಾ ಸೇತುವೆ ಮೂಲಕ ಹೊಸ ಸೇವೆ

147 ಹೆಚ್ಚುವರಿ ಸೇವೆಗಳಲ್ಲಿ 43 ಸೇವೆಗಳು ಖಲೀಫಾ ಸೇತುವೆ ಮೂಲಕ ಸಾಗಲಿದೆ. ಶಹಾಮಾ ಮತ್ತು ಯಾಸ್ ದ್ವೀಪದಿಂದ ನಗರಕ್ಕೆ ಬರುವವರು ಈ ಬಸ್ ಸೇವೆಗಳನ್ನು ಪಡೆಯಬಹುದು. ಮುಸಫ್ಫಾ, ಬನಿಯಾಸ್ ಮತ್ತು ಅಲ್‌ನಹ್ದಾ ಪ್ರದೇಶಗಳ ಪ್ರಯಾಣಿಕರು ಮಕ್ತಾ ಸೇತುವೆಯಿಂದ ಸಾಗುವ 104 ಹೆಚ್ಚುವರಿ ಸೇವೆಗಳ ಪ್ರಯೋಜನ ಪಡೆಯಲಿದ್ದಾರೆ.

error: Content is protected !! Not allowed copy content from janadhvani.com