janadhvani

Kannada Online News Paper

ಕೆಸಿಎಫ್ ಹಜ್ಜ್ ಸ್ವಯಂ ಸೇವಕರ ತಂಡಕ್ಕೆ ಚಾಲನೆ-ದಿನದ 24 ತಾಸುಗಳಲ್ಲೂ ಸೇವೆ ಲಭ್ಯ

ಮಕ್ಕಾ: 2019 ನೇ ಸಾಲಿನ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಭಾರತದಿಂದ ಹಾಗೂ ವಿಶ್ವದ ವಿವಿಧ ರಾಷ್ಟ್ರಗಳಿಂದ ಆಗಮಿಸುವ ಹಜ್ಜಾಜಿಗಳ ಸೇವೆಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಧೀನದಲ್ಲಿರುವ (HVC) ಹಜ್ಜ್ ಸ್ವಯಂ ಸೇವಕರ ತಂಡಕ್ಕೆ ಶುಕ್ರವಾರ ಜುಮಾ ನಮಾಜಿನ ಬಳಿಕ ಪವಿತ್ರ ಮಸ್ಜಿದುಲ್ ಹರಮ್ ಶರೀಫ್ ನಲ್ಲಿ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ರವರ ಪ್ರಾರ್ಥನೆಯ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.

ನಂತರ ಸ್ವಯಂ ಸೇವಕರನ್ನು ಹಾಜಿಗಳಿಗೆ ಎಲ್ಲಾ ರೀತಿಯಲ್ಲಿ ನೆರವಾಗುವ ರೀತಿಯಲ್ಲಿ ಹರಮ್ ಪರಿಸರ, ಆಸ್ಪತ್ರೆ, ಹಜ್ಜ್ ಬಿಲ್ಡಿಂಗ್ ಮುಂತಾದ ಅಗತ್ಯವಿರುವ ಕಡೆಗಳಿಗೆ ವಿವಿಧ ತಂಡಗಳಾಗಿ ವಿಂಗಡಿಸಲಾಯಿತು.HVC ನ್ಯಾಷನಲ್ ಕೋರ್ಡಿನೇಟರ್ ಇಬ್ರಾಹಿಂ ಕಿನ್ಯ ಮಾತನಾಡಿ ಸ್ವಯಂ ಸೇವಕರಿಂದ ಹಾಜಿಗಳಿಗೆ ದೊರೆಯುವ ಸೇವೆಯು ತಾಳ್ಮೆ ಮತ್ತು ಸಹನೆಯಿಂದ ಕೂಡಿರಲಿ ಹಾಗೂ ಕಾರ್ಯಾಚರಣೆಗೆ ಅಗತ್ಯವಿರುವ ಇತರ ಹಲವಾರು ಮಾಹಿತಿಗಳನ್ನು ನೀಡಿದರು.

ಇದೇ ವೇಳೆ HVC ನಾಯಕ ಮೂಸಾ ಹಾಜಿ ಕಿನ್ಯ ರವರು ಮಾತಾನಾಡಿ ಇಂದಿನಿಂದ ಪ್ರಾರಂಭವಾಗುವ HVC ಹಜ್ಜ್ ಸ್ವಯಂ ಸೇವಕರ ಸೇವೆ ಮಕ್ಕಾದಿಂದ ಹಾಜಿಗಳು ನಿರ್ಗಮಿಸುವವರೆಗೊ ನಿರಂತರವಾಗಿ ದಿನದ 24 ತಾಸುಗಳು ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ HVC ಉಪ ಕಪ್ತಾನರಾದ ಹಾರಿಸ್ ಕಿನ್ಯ, ಬಶೀರ್ ಕೆಜೆಕಾರ್ ಹಾಗೂ HVC ಮೀಡಿಯಾ ಕನ್ವಿನರ್ ಕಲಂದರ್ ಶಾಫೀ ಅಸೈಗೋಳಿ ಮತ್ತು HVC ಸ್ವಯಂ ಸೇವಕರು ಉಪಸ್ಥಿತರಿದರು.

error: Content is protected !! Not allowed copy content from janadhvani.com