janadhvani

Kannada Online News Paper

ಆಂತರಿಕ ಹಜ್ ಬುಕ್ಕಿಂಗ್ ರದ್ದುಪಡಿಸುವ ವಿಧಾನ ಜಾರಿಗೆ

ರಿಯಾದ್: ಆಂತರಿಕ ಹಜ್ ಬುಕ್ಕಿಂಗ್ ರದ್ದುಪಡಿಸುವ ಕ್ರಮಗಳನ್ನು ಜಾರಿಗೆ ತರಲು ಹಜ್ ಸಚಿವಾಲಯ ನಿರ್ಧರಿಸಿದೆ. ಹಣ ಪಾವತಿಸುವ ಮುನ್ನ ರದ್ದು ಪಡಿಸಿದರೆ ಯಾವುದೇ ದಂಡ ಪಾವತಿಸಬೇಕಾಗಿಲ್ಲ. ಆದರೆ, ಹಣ ಪಾವತಿಸಿದ ಬಳಿಕ ರದ್ದುಪಡಿಸುವುದಾದರೆ ನಿಶ್ಚಿತ ಮೊತ್ತ ಈಡು ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಹಜ್‌ಗಾಗಿ ನೀಡಲಾಗುವ ಅನುಮತಿ ಪತ್ರವನ್ನು ಕೆಲವು ಕಾರಣಾಂತರಗಳಿಂದ ಆಂತರಿಕ ಸಚಿವಾಲಯ ತಿರಸ್ಕರಿಸುವುದುಂಟು, ಈ ಕಾರಣದಿಂದ ಬುಕ್ಕಿಂಗ್ ರದ್ದಾದಲ್ಲಿ 26.25 ರಿಯಾಲ್ ಮತ್ತು ಬ್ಯಾಂಕ್ ಟ್ರಾನ್ಫರ್ ಮೊತ್ತವಾಗಿ 7.35 ರಿಯಾಲ್ ಈಡು ಮಾಡಲಾಗುತ್ತದೆ. ಹಣ ಪಾವತಿಸಿದ ಬಳಿಕ ಅನುಮತಿ ಪತ್ರ ಮುದ್ರಣಗೊಳ್ಳುವ ಮುನ್ನ ರದ್ದುಪಡಿಸಿದರೆ 68.25 ರಿಯಾಲ್ ಮತ್ತು ಬ್ಯಾಂಕ್ ಟ್ರಾನ್ಫರ್ ಮೊತ್ತವಾಗಿ 7.35 ರಿಯಾಲ್ ಈಡುಮಾಡಲಾಗುವುದು. ದುಲ್‌ಹಜ್ ಒಂದರ ವರೆಗೆ ಈ ಮೊತ್ತ ಪಾವತಿಸಬೇಕಾಗುತ್ತದೆ.

ದುಲ್‌ಹಜ್ ಎರಡರಂದು ರದ್ದುಪಡಿಸುವುದಾದರೆ ಪಾವತಿಸಿದ ಮೊತ್ತದ ಮೂವತ್ತು ಶೇಕಡಾ ಹಣವನ್ನು ಈಡು ಮಾಡಲಾಗುತ್ತದೆ. ಇದರ ಬಳಿಕದ ಪ್ರತೀ ದಿನಗಳಿಗೆ ಶೇ.10ರಷ್ಟು ಕಡಿತಗೊಳಿಸಲಾಗುವುದು. ಅನುಮತಿ ಪತ್ರ ಮುದ್ರಣಗೊಳ್ಳುವ ಮುನ್ನ ಇಲೆಕ್ಟ್ರಾನಿಕ್ ಟ್ರಾಕ್ ಮೂಲಕ ಅರ್ಜಿ ಸಲ್ಲಿಸಿದ ನಂತರ ರದ್ದುಪಡಿಸಬೇಕು. ಅನುಮತಿ ಪತ್ರ ಮುದ್ರಿಸಲ್ಪಟ್ಟಿದ್ದಲ್ಲಿ ಅಬ್ಶೀರ್ ಮೂಲಕ ಅನುಮತಿ ಪತ್ರವನ್ನು ರದ್ದು ಪಡಿಸಬೇಕು. ಬಳಿಕ ಇ-ಟ್ರಾಕ್ ಮೂಲಕ ಮುಂದುವರಿಯಬೇಕು ಎಂದು ಹಜ್ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com