ಕೆಸಿಎಫ್ ಅಲ್ ಖಸೀಂ ಝೋನ್: ಸಾಂತ್ವನ ನಿಧಿಗೆ ಚಾಲನೆ

ರಿಯಾದ್: ಸಾಂತ್ವನ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೆ.ಸಿ.ಎಫ್ ತನ್ನ ಸದಸ್ಯರಿಗಾಗಿ ಆರ್ಥಿಕ ಸಹಾಯ ನೀಡುವ ವಿಶಿಷ್ಟ ಯೋಜನೆಯಾಗಿದೆ MRF. ಕೆ.ಸಿ.ಎಫ್ ಸೌದಿ ಅರೇಬಿಯಾದಾದ್ಯಂತ ಜುಲೈ 5ರಂದು ಎಲ್ಲಾ ಝೋನ್”ಗಳಲ್ಲಿ ಏಕಕಾಲದಲ್ಲಿ ಈ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು.

ಕೆ.ಸಿ.ಎಫ್ ಅಲ್ ಖಸೀಂ ಝೋನ್” ಅಧೀನದಲ್ಲಿ ನಡೆದ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನಡೆಯಿತು ಬುರೈದ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಕರೀಂ ಇಮ್ದಾದಿ ಉಸ್ತಾದರ ದುವಾದೊಂದಿಗೆ
ಝೋನ್” ಅಧ್ಯಕ್ಷರಾದ ಅಬ್ದುಲ್ ಖಯ್ಯೂಂ ಉಸ್ತಾದರ ಆಧ್ಯಕ್ಷತೆಯಲ್ಲಿ ಬಹು ಶರೀಫ್ ಅಮಾನಿ ಉಸ್ತಾದ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ICF ನೇತಾರ ಮುಹಮ್ಮದ್ ಕೊಪ್ಪ ಹಾಗೂ OICC ನೇತಾರ ಅಬ್ದುಲ್ ಲತೀಫ್ ಶೇರಿಯವರು MRF ಸಾಂತ್ವನ ನಿಧಿಗೆ ಅದಿಕೃತವಾಗಿ ಚಾಲನೆ ನೀಡಿದರು.

MRF ಸಾಂತ್ವನ ನಿಧಿಯ ಅಗತ್ಯತೆ ಮತ್ತು ಅನಿವಾರ್ಯತೆಯ ಬಗ್ಗೆ
ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಸಾಲಿ ಬೆಳ್ಳಾರೆ ಸವಿವರವಾಗಿ ವಿವರಿಸಿದರು. ಕೆ.ಸಿ.ಎಫ್ ಅಲ್ ಖಸೀಂ ಝೋನ್” ಅಧೀನದ ಸೆಕ್ಟರ್, ಯೂನಿಟ್’ಗಳ ನೇತಾರರು ಹಾಗೂ ಕಾರ್ಯಕರ್ತರುಗಳು ಬಾಗವಹಿಸಿದ್ದರು.

ಬಶೀರ್ ಕನ್ಯಾನ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!