ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್: HVC ತರಬೇತಿ ಶಿಬಿರ ಹಾಗೂ ಸಾಂತ್ವನ ನಿಧಿಗೆ ಚಾಲನೆ

ಮಕ್ಕಾ: KCF ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಹಜ್ಜ್ ಸ್ವಯಂ ಸೇವಕರ ತರಬೇತಿ ಶಿಬಿರ ಹಾಗೂ 2019-20 ನೇ ಸಾಲಿನ MRF ಸಾಂತ್ವನ ನಿಧಿಗೆ ಜಬಲನ್ನೂರು ಮೂಸಾ ಹಾಜಿ ನಿವಾಸದಲ್ಲಿ ಅದಿಕೃತ ಚಾಲನೆ ನೀಡಲಾಯಿತು.

ಹನೀಫ್ ಸಖಾಫಿ ಬೋಳ್ಮಾರ್ ರವರು ಸ್ವಾಗತಿಸಿ, ಸಂಘಟನಾ ಇಲಾಖೆ ಕಾರ್ಯದರ್ಶಿ ಫಾರೂಕ್ ಹನೀಫೀ ಬೋವು ಉದ್ಘಾಟಿಸಿದರು.

HVC ಸ್ವಯಂ ಸೇವಕರಿಗೆ ತರಬೇತಿ ನಡೆಸಿದ ಬಹು:ಉಮ್ಮರ್ ಕಾಮಿಲ್ ಸಖಾಫಿ ಪರಪ್ಪು ರವರು, ಪವಿತ್ರ ಹಜ್ಜ್ ಕರ್ಮವನ್ನು ನಿರ್ವಹಿಸಲು ಭಾರತದಿಂದ ಹಾಗೂ ವಿಶ್ವದ ವಿವಿಧ ದೇಶಗಳಿಂದ ಆಗಮಿಸುವ ಹಜ್ಜಾಜಿಗಳಿಗೆ (KCF) ಕರ್ನಾಟಕ ಕಲ್ಚರಲ್ ಪೌಂಡೇಷನ್ HVC ಸ್ವಯಂ ಸೇವಕರು ನೀಡುವ ಸೇವೆ ಬಹಳ ತಾಳ್ಮೆ ಮತ್ತು ನಗು ಮುಖದಿಂದ ಕೂಡಿರಲಿ ಹಾಗೂ ಹಜ್ಜಾಜಿಗಳಿಗೆ ನಿಮ್ಮ ಸೇವೆ ಉತ್ತಮ್ಮ ರೀತಿಯಲ್ಲಾಗಿರಲಿ, ಅದರೊಂದಿಗೆ ಸಂಘಟನಾ ನಿಯಮ ಪಾಲನೆ ಬಹು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ MRF 2019-20 ನೇ ಸಾಲಿನ ಸಾಂತ್ವನ ನಿಧಿ ಪ್ರತಿಯನ್ನು ಸಾಂತ್ವನ ಇಲಾಖೆ ಅಧ್ಯಕ್ಷ ಮೂಸಾ ಹಾಜಿ ಕಿನ್ಯರವರು ಸೆಕ್ಟರ್ ಕೋಶಾಧಿಕಾರಿ ಮುಹಮ್ಮದ್ ಗಂಟಲ್ಕಟೆ ರವರಿಗೆ ನೀಡಿ ಚಾಲನೆ ಗೈದರು .
ಕಾರ್ಯಕ್ರಮವನ್ನು ಸೆಕ್ಟರ್ ಹಂಗಾಮಿ ಕಾರ್ಯದರ್ಶಿ ಅಬ್ದುಲ್ಲಾಹ್ ಕಿನ್ಯ ನಿರೂಪಿಸಿ ಕಲಂದರ್ ಶಾಫೀ ಅಸೈಗೋಳಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!