janadhvani

Kannada Online News Paper

ಯುಎಇ: 18 ವರ್ಷದ ಕೆಳಗಿನ ಮಕ್ಕಳಿಗೆ ಉಚಿತ ಸಂದರ್ಶಕ ವಿಸಾ

ಅಬುಧಾಬಿ: ಪೊಷಕರೊಂದಿಗೆ ಯುಎಇ ಸಂದರ್ಶಿಸುವ ಹದಿನೆಂಟರ ಒಳಗಿನ ಮಕ್ಕಳಿಗೆ ಉಚಿತ ವಿಸಾ ನೀಡುವುದಾಗಿ ಫೆಡರಲ್ ಅಥಾರಿಟಿ ಫಾರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್ಶಿಪ್ ತಿಳಿಸಿದೆ.

ಪ್ರತೀ ವರ್ಷ ಜುಲೈ 15ರಿಂದ ಸೆಪ್ಟೆಂಬರ್ 15ರ ವರೆಗೆ ಈ ಸೌಲಭ್ಯ ದೊರಕಲಿದ್ದು, ವಿನೋದ ಯಾತ್ರಿಕರ ಸಂಖ್ಯೆಯಲ್ಲಿ ಕಡಿಮೆ ಕಂಡು ಬರುವ ಸಮಯದಲ್ಲಿ ಹೆಚ್ವಿನ ಯಾತ್ರಿಕರನ್ನು ಆಕರ್ಷಿಸುವ ಸಲುವಾಗಿ ಈ ನಡೆ ಎನ್ನಲಾಗಿದೆ.ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಬಗೆಗಿನ ತೀರ್ಮಾನವನ್ನು ಸಚಿವಾಲಯ ಕೈಗೊಂಡಿದೆ.

ಇದು ಈ ಯೋಜನೆ ಜಾರಿಯಾಗುವ ಪ್ರಥಮ ವರ್ಷವಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಹದಿನಾಲ್ಕು ದಿನಗಳ ಎಕ್ಸ್‌ಪ್ರೆಸ್ ಟೂರಿಸ್ಟ್ ವಿಸಾಗೆ 497 ದಿರ್ಹಂ ಮತ್ತು 30 ದಿನಗಳ ಮಲ್ಟಿ ಎಂಟ್ರಿ ಟೂರಿಸ್ಟ್ ವಿಸಾಗೆ 917 ದಿರ್ಹಂ ದರ ಪಾವತಿ ಮಾಡಬೇಕಾಗಿದೆ.

ಈ ತೀರ್ಮಾನ ಮೂಲಕ ದೇಶಕ್ಕೆ ಹೆಚ್ಚಿನ ಸಂಚಾರಿಗಳನ್ನು ಆಕರ್ಷಿಸಲು ಸಾಧ್ಯವಾದರೂ, ಹೆಚ್ಚಿನ ಸಂಖ್ಯೆಯ ವಿದೇಶಿಗಳು ಬರುವ ಸಾಧ್ಯತೆ ಕಡಿಮೆ ಎಂದು ಟ್ರಾವೆಲ್, ಟೂರೀಸಂ ವಲಯದಲ್ಲಿ ಕಾರ್ಯಾಚರಿಸುವ ಪರಿಣಿತರ ಅಭಿಪ್ರಾಯವಾಗಿದೆ.

ಅತೀ ಹೆಚ್ಚಿನ ಸಂಚಾರಿಗಳು ಬರುವ ಭಾರತ ಸಹಿತ ದೇಶಗಳಿಂದ ಶಾಲಾ ರಜಾದಿನಗಳಾದ ಎಪ್ರಿಲ್‌ನಿಂದ ಜೂನ್ ವರೆಗಿನ ಸಮಯದಲ್ಲಿ ಅತೀ ಹೆಚ್ಚಿನ ಸಂಚಾರಿಗಳು ಆಗಮಿಸುತ್ತಾರೆ ಎನ್ನಲಾಗಿದೆ.

error: Content is protected !! Not allowed copy content from janadhvani.com