janadhvani

Kannada Online News Paper

ಮರಣದ ನೆನಪು ಬಾರದಿರುವುದರಿಂದ ದುಷ್ಕೃತ್ಯಗಳು ಹೆಚ್ಚುತ್ತಿದೆ : ಇಬ್ರಾಹಿಂ ಸಅದಿ ಮಾಣಿ

ಈ ವರದಿಯ ಧ್ವನಿಯನ್ನು ಆಲಿಸಿ


ಮಾಣಿ : ತಾನು ಧರಿಸಿದ ವಸ್ತ್ರ ,ಚಿನ್ಬಾಭರಣಗಳನ್ನು ಕೂಡಲೇ ಕಳಚಿ ತೆಗೆಯಲಾಗುತ್ತದೆ,ಮತ್ತೆ ನಮ್ಮದೆಂದು ನಮಗೆ ಸಿಗುವುದು ನಾವು ಮಾಡಿದ ಪುಣ್ಯ ಕರ್ಮಗಳು ಮಾತ್ರ,ಆಸ್ತಿ ಅಂತಸ್ತು, ಸೊತ್ತುಗಳನ್ನು ಇಲ್ಲೇ ಬಿಟ್ಟು ಹೋಗುತ್ತೇವೆ ಮರಣಹೊಂದಿದ ಕೂಡಲೇ ನಮ್ಮ ಹೆಸರೂ ಕೂಡ ತೆಗೆದು ಮಯ್ಯಿತ್ ಅಂತ ಹೆಸರಿಡಲಾಗುತ್ತದೆ .

ಅದನ್ನೆಲ್ಲಾ ಜೀವವಿರುವಾಗ ಪದೇ ಪದೇ ನೆನಪಿಸಿಕೊಂಡರೆ ಯಾವುದೇ ರೀತಿಯ ದುಷ್ಕೃತ್ಯಗಳು ನಮ್ಮಿಂದ ಉಂಟಾಗದು,ಆದರೆ ನಾವು ಆ ಮರಣವನ್ನೇ ಮರೆತು ಇಲ್ಲಿನ ಲೌಕಿಕ ಜೀವನವನ್ನೇ ನೆಚ್ಚಿಕೊಂಡು ಬದುಕಿದಾಗ ಪಾಪಕೃತ್ಯಗಳು ಯಾವುದೇ ಅಂಜಿಕೆ ಇಲ್ಲದೆ ನಮ್ಮಿಂದ ನಡೆದುಹೋಗುತ್ತದೆ ಅಥವಾ ಮಾಡುತ್ತೇವೆ,ಅಹಂಕಾರಿಯಾಗದೆ ಯಾರಿಗೂ ಕೇಡು ಬಯಸದೆ ಯಾರಿಗೂ ಅನ್ಯಾಯ ಮಾಡದೆ ಮರಣದ ಭಯದೊಂದಿಗೆ ಸಜ್ಜನರಾಗಿ ಬದುಕಿದರೆ ,ಆ ಮೂಲಕ ಪರಲೋಕ ವಿಜಯದ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಮಾಣಿ ದಾರುಲ್ ಇರ್ಶಾದ್ ನಲ್ಲಿ ತರಾವೀಹ್ ನಮಾಝ್ ಬಳಿಕದ ಮತ ಪ್ರಭಾಷಣದಲ್ಲಿ ಇಬ್ರಾಹಿಂ ಸಅದಿ ಉಸ್ತಾದರು ಹೇಳಿದರು.

ಭೂಲೋಕದ ಕ್ಷಣಿಕ ಜೀವನಕ್ಕಾಗಿ ಶಾಶ್ವತ ಪರಲೋಕ ಜೀವನವನ್ನು ಮರೆತು ಜೀವಿಸುವ ಬಗ್ಗೆ ಅವರು ಎಚ್ಚರಿಸಿದರು.

ವರದಿ : ಸಲೀಂ ಮಾಣಿ

error: Content is protected !! Not allowed copy content from janadhvani.com