janadhvani

Kannada Online News Paper

ಮಳ್ಹರ್ ಮಕ್ಕಾ ವತಿಯಿಂದ ಸ್ವಲಾತ್ ವಾರ್ಷಿಕ ಮತ್ತು ಇಫ್ತಾರ್ ಸಂಗಮ

ಈ ವರದಿಯ ಧ್ವನಿಯನ್ನು ಆಲಿಸಿ


ಮಕ್ಕಾ: ಪೊಸೋಟು ಮಳ್ಹರ್ ಮಕ್ಕಾ ಸಮಿತಿಯ ವತಿಯಿಂದ ಮಕ್ಕತುಲ್ ಮುಕರ್ರಮದ ಸಾರಲ್ ಹಜ್ಜ್ ಅಬ್ದುಲ್ ಲತೀಫ್ ಹಾಜಿಯವರ ನಿವಾಸದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ತಂಙಳ್ ಪೊಸೋಟು ರವರ ನೇತೃತ್ವದಲ್ಲಿ ಇಫ್ತಾರ್ ಸಂಗಮ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಿತು.

ಮರ್ಹೂಮ್ ಸಯ್ಯಿದ್ ಪೊಸೋಟು ತಂಙಳ್ ರವರು ಇಜಾಝತ್ ಪ್ರಕಾರ ಆರಂಭಿಸಿದ ಸ್ವಲಾತ್ ಮಜ್ಲಿಸ್ ಎಲ್ಲಾ ತಿಂಗಳು ನಡೆಯುತ್ತಿದ್ದು, ಇದರ ವಾರ್ಷಿಕ ಅಂಗವಾಗಿ ಏರ್ಪಡಿಸಿದ ಬೃಹತ್ ಇಫ್ತಾರ್ ಸಂಗಮದಲ್ಲಿ ಸಯ್ಯಿದ್ ಶಹೀರ್ ತಂಙಳ್ ರವರು ಮಾತಾಡಿ ಮಳ್ಹರ್ ಗೆ ಸಹಾಯ ಸಹಕಾರ ಮಾಡುವವರಿಗೆ ವಿಶೇಷವಾಗಿ ಎಲ್ಲಾ ದಿವಸ ಮಳ್ಹರ್ ನಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತಿದೆ, ನಿಮ್ಮಲ್ಲೆ ಸಹಾಯ ಸಹಕಾರದಿಂದ ಮಳ್ಹರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ದೀನೀ ಜ್ಞಾನವಿಲ್ಲದ ಕೆಲವು ಊರುಗಳಲ್ಲಿ ‌ಮಳ್ಹರ್ ಸಂಸ್ಥೆಯ ಸ್ಥಾಪನೆಯ ವಿಧ್ಯಾರ್ಥಿಗಳು ದೀನೀ ದಅ್ವತ್ ನಡೆಸಿ ಅಲ್ಲಿಯ ಕೆಲವು ಶೋಚನೀಯ ಪರಿಸ್ಥಿತಿ ವಿವರಿಸುವಾಗ ಬಹಳ ದುಖಃವಾಗುತ್ತಿವೆ ಅಲ್ಲಿಯೂ ಕೆಲವು ಕಡೆ ನಮ್ಮ ಸ್ಥಾಪನೆಗಳು ತಲೆ ಎತ್ತುತ್ತಿವೆ ಅದಕ್ಕೆಲ್ಲ ನಿಮ್ಮ ಬೆಂಬಲ ಅಗತ್ಯವಾಗಿದೆ ಎಂದು ಹೇಳಿ ವಿಶೇಷ ದುಅಃ ಮಜ್ಲಿಸ್ ನಡೆಸಿ ಮಳ್ಹರ್ ಕಾರ್ಯಕರ್ತರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ KCF, ICF, RSC ಮೊದಲಾದ ಮಕ್ಕತುಲ್ ಮುಕರ್ರಮದ ಸುನ್ನತ್ ಜಮಾಅತಿನ ಸಂಘ ಕುಟುಂಬಗಳ ನೇತಾರರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಇಕ್ಬಾಲ್ ಕಕ್ಕಿಂಜೆ
ಪ್ರಧಾನ ಕಾರ್ಯದರ್ಶಿ ಮಳ್ಹರ್ ಮಕ್ಕಾ

error: Content is protected !! Not allowed copy content from janadhvani.com