janadhvani

Kannada Online News Paper

ಒಗ್ಗಟ್ಟಿನಿಂದ ಕಾರ್ಯಾಚರಿಸಿದರೆ ಸಂಘಟನೆ ಯಶಸ್ವಿ: ಮಕ್ಕಾದಲ್ಲಿ ಕಾಟುಕುಕ್ಕೆ ತಂಙಳ್

ಈ ವರದಿಯ ಧ್ವನಿಯನ್ನು ಆಲಿಸಿ


ಮಕ್ಕಾ: ಜಿ ಸಿ ಸಿ ಸುನ್ನಿ ಫ್ರೆಂಡ್ಸ್ ಬನ್ನೂರು ವತಿಯಿಂದ ಖ್ವಾಜಾ ಘರೀಬ್ ನವಾಜ್ ಅಲ್-ಹಿಂದ್ ಅಜ್ಮೀರ್ (ಖ.ಸಿ), ತಾಜುಲ್ ಉಲಮಾ (ಖ.ಸಿ) ಅನುಸ್ಮರಣೆ ಹಾಗೂ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಜಬಲನ್ನೂರ್ ಮಕ್ಕತುಲ್ ಮುಕರ್ರಮದಲ್ಲಿ ಉಮ್ಮರ್ ಹಾಜಿ ಕರ್ವೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೆ.ಸಿ.ಎಫ್ ಜಿದ್ದಾ ಝೋನ್ ಅಧ್ಯಕ್ಷರಾದ ಹಾಫಿಳ್ GM ಸುಲೈಮಾನ್ ಹನೀಫಿ ಉದ್ಘಾಟಿಸಿದರು.

ಸ್ವಲಾತ್ ಮಜ್ಲಿಸ್ ಗೆ ನೇತೃತ್ವವನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಯ್ಯಿದ್ ಇಂಬಿಚ್ಚಿಕೋಯ ಜಮುಲ್ಲೈಲಿ ತಂಙಳ್ ಕಾಟುಕುಕ್ಕೆಯವರು, ಯಾವುದೇ ಒಂದು ಸಂಘಟನೆಯು, ಯಶಸ್ವಿಯಾಗಿ ಮುನ್ನಡೆಯಲು ಅದರ ಪ್ರತಿಯೊಬ್ಬ ಸದಸ್ಯರ ಪರಿಶ್ರಮವು ಅತ್ಯಗತ್ಯ, ಪ್ರತಿಯೊಬ್ಬರೂ ಕಾರ್ಯಚರಿಸಿದರೆ ಮಾತ್ರ ಒಂದು ಸಂಘಟನೆ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದರು. ಜಿ ಸಿ ಸಿ ಸುನ್ನಿ ಫ್ರೆಂಡ್ಸ್ ನಡೆಸುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.

ತ್ವೈಬಾ ಎಜ್ಯುಕೇಶನಲ್ ಸೆಂಟರ್ ಈಶ್ವರಮಂಗಿಲ ಹಾಗೂ ವೈಸ್ ಪ್ರಿನ್ಸಿಪಾಲ್ ಮುಹಿಮ್ಮಾತ್ ಕುರ್’ಆನ್ ರಿಸರ್ಚ್ ಸೆಂಟರ್ ಇದರ ಮುದರ್ರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಿಲ ಅನುಸ್ಮರಣಾ ಭಾಷಣ ಮಾಡಿದರು.

ಇದೇ ವೇಳೆ ಸಯ್ಯಿದ್ ಇಂಬಿಚ್ಚಿಕೋಯ ಜಮಲುಲ್ಲೈಲಿ ತಂಙಳ್ ಕಾಟುಕುಕ್ಕೆ ಹಾಗೂ ಎಸ್.ವೈ.ಎಸ್ ಬನ್ನೂರು ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬನ್ನೂರು ರವರನ್ನು ಜಿ ಸಿ ಸಿ ಸುನ್ನಿ ಫ್ರೆಂಡ್ಸ್ ಬನ್ನೂರು ನಾಯಕರಾದ ಇಬ್ರಾಹಿಮ್ ಪಾಪ್ಲಿ ,ಉಮ್ಮರ್ ಕರ್ವೆಲು,ಝಕರಿಯ್ಯಾ ಕಟ್ಟೆ, ಬಶೀರ್ ಅಕ್ಕರೆ ಮೊದಲಾದವರು ಶಾಲು ಹೊದಿಸಿ ಸನ್ಮಾಸಿದರು.

ಕಾರ್ಯಕ್ರಮದಲ್ಲಿ ಜಿ.ಎಂ.ಇಬ್ರಾಹಿಂ ಫುರ್ಖಾನಿ ಪಾಣೆಮಂಗಳೂರು, ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಾಂತ್ವನ ವಿಭಾಗ ಅಧ್ಯಕ್ಷರಾದ ಮೂಸಾ ಹಾಜಿ ಕಿನ್ಯಾ, ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ, ಕೆಸಿಎಫ್ ಜಬಲನ್ನೂರು ಯೂನಿಟ್ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಸಾಲ್ಮರ, ಕೆಸಿಎಫ್ ಝಾಯಿದಿ ಯೂನಿಟ್ ಅಧ್ಯಕ್ಷರಾದ ಬಶೀರ್ ಕೆಜೆಕಾರ್, ಕೆಸಿಎಫ್ ಜಬಲನ್ನೂರು ಯೂನಿಟ್ ಕೋಶಾಧಿಕಾರಿ ಹಾರಿಸ್ ಕಿನ್ಯಾ ,ರಫೀಕ್ ಪೆರ್ನೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರವನ್ನು ಇಬ್ರಾಹಿಮ್ ಪಾಪ್ಲಿ ಸ್ವಾಗತಿಸಿ ನಿರೂಪಿಸಿದರು.

error: Content is protected !! Not allowed copy content from janadhvani.com