ವಿಸಾ, ಎಮಿರೇಟ್ಸ್ ಐಡಿಗಳಿಗೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು

ಶಾರ್ಜಾ: ಎಮಿರೇಟ್ಸ್ ಐಡಿ, ವೀಸಾಗಳನ್ನ ನವೀಕರಣ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ವಸತಿ ಮತ್ತು ವಿದೇಶಿಯ ವ್ಯವಹಾರಗಳ ಜನರಲ್ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಅದಕ್ಕಾಗಿ ಕಾರ್ಯಾಲಯ ಅಥವಾ ಟೈಪಿಂಗ್ ಕೇಂದ್ರಗಳಿಗೆ ತೆರಳಿ ಹಣ ಮತ್ತು ಸಮಯ ವ್ಯರ್ಥ ಮಾಡಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಎಮಿರೇಟ್ಸ್ ಐಡಿ ಮತ್ತು ವೀಸಾ ನವೀಕರಣಕ್ಕಾಗಿ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ನವೀಕರಣ ಮಾಡಬಹುದಾಗಿದ್ದು, ಇದಕ್ಕಾಗಿ GDRFA ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಅಗತ್ಯವಿದೆ.

ದೇಶದಿಂದ ಅಥವಾ ದೇಶದ ಹೊರಗಿನಿಂದಲೂ ಪ್ರವಾಸಿ ವೀಸಾಗೆ ಅಪೇಕ್ಷೆಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು ಎಂದು GDRFA ಶಾರ್ಜಾ ಡೈರೆಕ್ಟರ್ ಜನರಲ್ ಕರ್ನಲ್ ಆರಿಫ್ ಅಲ್ ಶಂಸಿ ಹೇಳಿದರು.

ಮೊಬೈಲ್ ಆ್ಯಪ್ ಮೂಲಕ ಲಭಿಸಿದ ಅರ್ಜಿಗಳನ್ನು ಪರಿಗಣಿಸಲು ಈ ಹಿಂದೆ ಎರಡು ವಾರಗಳಷ್ಟು ವಿಳಂಬವಾಗುತ್ತಿದ್ದವು. ಆದರೆ ಇದೀಗ ಗರಿಷ್ಠ ಮೂರು ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದವರು ಹೇಳಿದರು.

ಮೊಬೈಲ್ ಆಪ್ ಮೂಲಕ ತಮ್ಮ ಅರ್ಜಿಯ ಬಗ್ಗೆ ಅನ್ವೇಷಣೆ ನಡೆಸಲು ಚಾಟಿಂಗ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!