ಪ್ರವಾದಿ ನಿಂದನೆ: ಕೇಸು ದಾಖಲಿಸದ ಪೋಲೀಸರ ಕ್ರಮದ ವಿರುದ್ಧ ಸಚಿವರಿಗೆ ಮನವಿ

ಮಂಗಳೂರು: ಪ್ರವಾದಿ ನಿಂದನೆ ಮಾಡಿದ ಸುವರ್ಣ ಚಾನೆಲ್ ನ ನಿರೂಪಕ ಅಜಿತ್ ಹನುಮಕ್ಕನ್ ರವರ ವಿರುದ್ಧ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಹಲವು ಠಾಣೆಗಳಲ್ಲಿ ದೂರು ನೀಡಿದರೂ ಕೇಸು ದಾಖಲಿಸದ ಪೋಲೀಸರ ಕ್ರಮದ ವಿರುದ್ಧ ಎಸ್ಸೆಸ್ಸೆಫ್ ಇಹ್ಸಾನ್ ರಾಜ್ಯಾಧ್ಯಕ್ಷರು ಮೌಲಾನ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ಅವರು ಮಾನ್ಯ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರನ್ನು ಭೇಟಿಯಾಗಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವರು ಪೋಲೀಸ್ ಆಯುಕ್ತರಿಗೆ ಕರೆ ಮಾಡಿ ದೂರಿನ ಬಗ್ಗೆ ಮಾಹಿತಿ ನೀಡಲು ಸೂಚಿಸಿದರು. ತಕ್ಷಣ ಮಾಹಿತಿ ಪಡೆದ ಆಯುಕ್ತರು, ಬೆಂಗಳೂರಿನಲ್ಲಿ ಕೇಸು ದಾಖಲಿಸಿದ್ದಾಗಿ ಸಚಿವರಿಗೆ ಮಾಹಿತಿ ನೀಡಿದರು.

One thought on “ಪ್ರವಾದಿ ನಿಂದನೆ: ಕೇಸು ದಾಖಲಿಸದ ಪೋಲೀಸರ ಕ್ರಮದ ವಿರುದ್ಧ ಸಚಿವರಿಗೆ ಮನವಿ

 1. *ಬ್ರೇಕಿಂಗ್ ನ್ಯೂಸ್*

  *ನಮ್ಮ ನಾಡು ನಮ್ಮದು ವಾಟ್ಸ್ ಆಪ್ ಗ್ರೂಪ್ ವತಿಯಿಂದ ನಾಳೆ ಸಂಜೆ 4 ಗಂಟೆಗೆ ಸರಿಯಾಗಿ ಅಸೈಗೋಳಿ ಜಂಕ್ಷನ್ ನಲ್ಲಿ *ಲೋಕ ಪ್ರವಾದಿ ಸ ಅ ರನ್ನು ಅಹಹೇಳನ ಮಾಡಿದ ಮಾಧ್ಯಮ ನಿರೂಪಕ ಅಜಿತ್ ಅನುಮಕ್ಕನವರ್ ವಿರುದ್ದ ಮತ್ತು ಶ್ರೀ ರಾಮ ದೇವರನ್ನು ನಿಂದಿಸಿದ ಭಗವಾನ್* ವಿರುದ್ದ
  ಉಗ್ರ ಪ್ರತಿಭಟನೆ ನಡೆಯಲಿದೆ
  ಈ ಒಂದು ಪ್ರತಿಭಟನೆಗೆ ನಾಡಿನ ಎಲ್ಲಾ ಸಮಸ್ತಭಾಂದವರು ಆಗಮಿಸಬೇಕಾಗಿ ವಿನಂತಿ

  *ನಮ್ಮ ನಾಡು ನಮ್ಮದು ವಾಟ್ಸ್ ಆಪ್ ಗ್ರೂಪ್ ಅಸೈಗೋಳಿ*

  *ಈ ಪ್ರತಿಭಟನೆಗೆ ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.ಅಸ್ಗರ್ ಮುಡಿಪು*

Leave a Reply

Your email address will not be published. Required fields are marked *

error: Content is protected !!