ಟಿವಿ ನಿರೂಪಕನಿಂದ ಪ್ರವಾದಿ ನಿಂದನೆ: ಎಸ್ಸೆಸ್ಸೆಫ್ ಖಂಡನೆ

ಬೆಂಗಳೂರು: ಟಿವಿ ಚರ್ಚೆಯೊಂದರಲ್ಲಿ ನಿರೂಪಕರೋರ್ವರು ಅನಗತ್ಯವಾಗಿ ಪ್ರವಾದಿಯವರ ಹೆಸರನ್ನು ಎಳೆದು ತಂದು ನಿಂದನೆ ಮಾಡಿರುವುದು ಖಂಡನಾರ್ಹ ಎಂದು ಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಹೇಳಿದ್ದಾರೆ.

ಭಗವಾನ್ ರವರು ರಾಮಾಯಣಕ್ಕೆ ಸಂಬಂಧಪಟ್ಟು ಬರೆದ ಕೃತಿಯಲ್ಲಿ ಯಾವುದಾದರು ಸಮುದಾಯಕ್ಕೆ ಭಾವನೆಗೆ ಘಾಸಿಯಾಗುವಂತಹ ವಿಚಾರಗಳಿದ್ದರೆ ಅದು ಬೆಂಬಲಾರ್ಹವಲ್ಲ. ಆದರೆ ಆ ಕುರಿತ ಚರ್ಚೆಯಲ್ಲಿ ಪ್ರವಾದಿಯವರ ಹೆಸರನ್ನು ಎಳೆದು ತರಬೇಕಾದ ಅಗತ್ಯವೇ ಇರಲಿಲ್ಲ. ಪ್ರೊ.ಭಗವಾನ್ ರವರು ಪ್ರವಾದಿಯವರ ಅನುಯಾಯಿಯಲ್ಲ. ಪ್ರವಾದಿಯವರ ಅನುಯಾಯಿಗಳಾರೂ ಶ್ರೀರಾಮನ ಕುರಿತು ಆಕ್ಷೇಪದ ಮಾತು ಆಡಿದ್ದೂ ಅಲ್ಲ. ಹಾಗಿರುವಾಗ ಅಲ್ಲಿ ಪ್ರವಾದಿಯವರ ಹೆಸರನ್ನು ಎಳೆದು ತರಬೇಕಾದ ಅಗತ್ಯ ಏನಿತ್ತು? ಇಂತಹ ಪತ್ರಕರ್ತರು ಸಮಾಜಕ್ಕೆ ಅಪಾಯಕಾರಿ ಎಂದು ಇಸ್ಮಾಈಲ್ ಸಖಾಫಿಯವರು ಪತ್ರಿಕಾಪ್ರಕಟನೆಯಲ್ಲಿ ಅಭಿಪ್ರಾಯಿಸಿದ್ದಾರೆ.

9 thoughts on “ಟಿವಿ ನಿರೂಪಕನಿಂದ ಪ್ರವಾದಿ ನಿಂದನೆ: ಎಸ್ಸೆಸ್ಸೆಫ್ ಖಂಡನೆ

  1. Arrest him those who coment against prophet Muhammad sallahualaihiwasalam…
    Otherwise we will protest against reporter

Leave a Reply

Your email address will not be published. Required fields are marked *

error: Content is protected !!