janadhvani

Kannada Online News Paper

ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ಹತ್ಯೆ:ಬಿಜೆಪಿಗರು ಅಮಿತ್ ಶಾಗೆ ತಿಳಿಸದಿರಲಿ!-ಕೆ.ಅಶ್ರಫ್

ಇತ್ತೀಚೆಗೆ ನೇಹಾ ಹತ್ಯಾ ಪ್ರಕರಣದಲ್ಲಿ ಗಂಭೀರವಾಗಿ ಪ್ರತಿಕ್ರಿಯಿಸಿದ, ದ.ಕ.ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ರವರು ಇಂದೇ ಹುಬ್ಬಳಿಗೆ ಹೊರಡುವರೇ?!

ಮಂಗಳೂರು: ಹುಬ್ಬಳ್ಳಿಯ ಮೀರಾಪುರನಲ್ಲಿ ಗಿರೀಶ್ ಸಾವಂತ್ (21) ಎಂಬ ಯುವಕ ಅಂಜಲಿ (20 ವ ) ಎಂಬ ಯುವತಿಯನ್ನು ತನ್ನ ಪ್ರೇಮ ವೈಫಲ್ಯ ಕಾರಣದಿಂದಾಗಿ ಹತ್ಯೆ ಮಾಡಿದ್ದು, ಘಟನೆಯು ವ್ಯಾಪಕತೆ ಪಡೆದಿದೆ.
ಇಂತಹ ವ್ಯಾಪಕತೆ ಪಡೆಯಲು,ಇತ್ತೀಚಿಗಿನ ಚುನಾವಣಾ ಪೂರ್ವ, ಬಿಜೆಪಿಗರ, ನೇಹಾ ಹತ್ಯೆ
ಪ್ರಕರಣದಲ್ಲಿ ಸಾಮಾನ್ಯ ಘಟನೆಯನ್ನು, ಆರೋಪಿತನು ಮುಸ್ಲಿಮ್ ನಾಮಾಂಕಿತ ಎಂಬ ಕಾರಣಕ್ಕಾಗಿ ಹತ್ಯೆ ಆರೋಪವನ್ನು ರಾಜ್ಯದ ಇಡೀ ಅಲ್ಪಸಂಖ್ಯಾತ ಸಮುದಾಯದ ಮೇಲೆ ಎತ್ತಿ ಕಟ್ಟಿ ಸಾಮೂಹಿಕ ಗಲಭೆ ಸೃಷ್ಟಿಸುವ ಪ್ರಯತ್ನದ ಮಟ್ಟಕ್ಕೆ ತಲುಪಿಸಿರುತ್ತಾರೆ.

ರಾಜ್ಯದ ಮುಖ್ಯಮಂತ್ರಿ ಈ ಘಟನೆಗೆ ನೇರ ಕಾರಣ ಎನ್ನುವ ಮಟ್ಟಕ್ಕೆ ಬಿಜೆಪಿಗರು ಅದನ್ನು ಎಳೆದು ಬಿಂಬಿಸಲು ಪ್ರಯತ್ನಿಸಿದ್ದು, ದುಷ್ಕರ್ಮಿ ಯುವಕ ಮಾಡಿದ ಸ್ವಯಂಕೃತ ಅಪರಾಧಕ್ಕೆ ಸಂಪೂರ್ಣ ಮುಸ್ಲಿಮ್ ಅಲ್ಪ ಸಂಖ್ಯಾತ ಸಮುದಾಯವನ್ನು ಹೊಣೆಯಾಗಿಸಿ, ಮುಸ್ಲಿಮೇತರ ಸಮುದಾಯದವರ ದೃಷ್ಟಿಯಲ್ಲಿ ಅಲ್ಪ ಸಂಖ್ಯಾತ ಸಮುದಾಯವನ್ನು ಅಪರಾಧಿ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಮಾಡಲಾಗಿದೆ.

ಇಂದು ಅಂತಹುದೇ ಘಟನೆ ಅಂಜಲಿ ಎಂಬ ಅಮಾಯಕ ಯುವತಿಗೆ ಸಂಭವಿಸಿರುವುದು ಖೇದಕರ, ಆದರೆ ರಾಜ್ಯ ಬಿಜೆಪಿ ನಾಯಕರು ಈ ಹತ್ಯೆಯನ್ನೂ ಕೂಡಾ ನೇಹಾ ಹತ್ಯೆಗೆ ಸಮಾನವಾಗಿ ಪರಿಗಣಿಸುವರೆ? ಎಂದು ನೋಡಬೇಕಿದೆ, ಸಾಮಾನ್ಯ ಹತ್ಯೆ ಘಟನೆಯನ್ನು ವೈಭವೀಕರಿಸಿ ಪ್ರತಿಭಟನೆ,ಹೇಳಿಕೆಗಳು, ಕೋಮು ವಿದ್ವೇಷತೆಯನ್ನು ಉತ್ತೇಜಿಸಿರುವುದು ನಾವು ಈ ಹಿಂದೆ ನೋಡಿದ್ದೇವೆ.

ರಾಜ್ಯ ಬಿಜೆಪಿಗರು ಪ್ರಸ್ತುತ ಅಂಜಲಿ ಹತ್ಯೆಯ ಮಹತ್ವವನ್ನು ಮಾನ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪ್ರಕರಣದ ಗಂಭೀರತೆಯನ್ನು ತಿಳಿಸಬೇಕಿದೆ!.
ರಾಜ್ಯ ಬಿಜೆಪಿ ನಾಯಕರ ಪ್ರತಿಕ್ರಿಯೆಗೆ ಜನತೆ ಕಾಯುತ್ತಿದೆ. ಆರೋಪಿತರು ಭಿನ್ನ ಸಮುದಾಯಕ್ಕೆ ಸೇರಿದವರಾದುದರಿಂದ, ಪ್ರಕರಣದಲ್ಲಿ ಪ್ರತಿಭಟನೆ,ಪ್ರಚಾರ, ನ್ಯಾಯ ವ್ಯತ್ಯಯತೆಯ ವಿಧಗಳನ್ನಾದರೂ ಬಹಿರಂಗ ಪಡಿಸಲಿ. ಇತ್ತೀಚೆಗೆ ನೇಹಾ ಹತ್ಯಾ ಪ್ರಕರಣದಲ್ಲಿ ಗಂಭೀರವಾಗಿ ಪ್ರತಿಕ್ರಿಯಿಸಿದ, ದ.ಕ.ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ರವರು ಇಂದೇ ಹುಬ್ಬಳಿಗೆ ಹೊರಡುವರೇ?! ನೋಡಬೇಕಿದೆ ?!.
ಹಾನಿಯಾದ ಅಮಾಯಕ ಜೀವಕ್ಕೆ ಸಂತಾಪವಿರಲಿ.

ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com