janadhvani

Kannada Online News Paper

ಎಸ್ಎಸ್ಎಫ್ ಕಾಯಾರ್ ಶಾಖೆಯ ಮಹಾಸಭೆ

ಬಾಳೆಪುಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ [SSF] ಕಾಯಾರ್ ಶಾಖೆಯ ವಾರ್ಷಿಕ ಮಹಾಸಭೆ ಮತ್ತು ಅಗಲಿದ ಉಲಮಾಗಳ ಅನುಸ್ಮರಣಾ ಸಂಗಮ 16-12-2018 ಆದಿತ್ಯವಾರ HI ಮದ್ರಸ ಕಾಯಾರ್ ನಲ್ಲಿ ಅದ್ಯಕ್ಷ ಆಸಿಫ್ ಕೆ.ಜಿ ಕಾಯಾರ್ ಅದ್ಯಕ್ಷತೆಯಲ್ಲಿ ನಡೆಯಿತು.

ಸದರ್ ಮುಅಲ್ಲಿಂ ಉಮರ್ ಮದನಿ ಪೊಯ್ಯತ್ತಬೈಲ್ ಕಾರ್ಯಕ್ರಮವನ್ನು ಉದ್ಘಾಟಟಿಸಿದರು. SSF ದ.ಕ ಜಿಲ್ಲಾ ಸದಸ್ಯರಾದ ಅಬ್ದುಲ್ ಮಜೀದ್ ಸಖಾಫಿ ಅಮುಂಜೆ ಅನುಸ್ಮರಣಾ ಭಾಷಣ ಮಾಡಿದರು. ಸಿದ್ದೀಕ್ ಸಖಾಫಿ ಕಾಯಾರ್ ಸಂದೇಶ ಭಾಷಣ ಮಾಡಿದರು. SSF ಬಾಳೆಪುಣಿ ಸೆಕ್ಟರ್ ಅದ್ಯಕ್ಷ ಅಝೀಝ್ ಎಚ್ಕಲ್ಲು ವಿಷಯ ಮಂಡಿಸಿದರು.

ಮಹಾಸಭೆ ವೀಕ್ಷಕರಾಗಿ ಸೆಕ್ಟರ್ ಕಾರ್ಯದರ್ಶಿ ಝೈನುದ್ದೀನ್ ಇರಾಸೈಟ್ ಕಾರ್ಯನಿರ್ವಹಿಸಿದರು. ಕಾರ್ಯದರ್ಶಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಮದ್ರಸ ಅದ್ಯಕ್ಷ ಹನೀಫ್ ತಚ್ಚಮಜಲು, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ನೌಶಾದ್ ಮದನಿ,RYC ಅದ್ಯಕ್ಷ ಇಸ್ಹಾಖ್ ಕಾಯಾರ್, KCF ಕಾರ್ಯಕರ್ತರಾದ ಹಂಝ ಮತ್ತು ಅಶ್ರಫ್ ಕಾಯಾರ್ ಹಾಗೂ ಹನೀಫ್ ಬೆಂಗಳೂರು ಉಪಸ್ಥಿತರಿದ್ದರು.

ನೂತನ ಸಾರಥಿಗಳು: ಅದ್ಯಕ್ಷರು ಆಸಿಫ್ ಕೆ.ಜಿ ಕಾಯಾರ್, ಪ್ರ.ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮತ್ತು ಕೋಶಾಧಿಕಾರಿಯಾಗಿ ಅಝೀಝ್ ಹನೀಫಿ ಕಾಯಾರ್ , ಉಪಾಧ್ಯಕ್ಷರುಗಳು ಇಲ್ಯಾಸ್ ತೋಟಾಲ್,ನವಾಝ್ ಮುಸ್ಲಿಯಾರ್ ಹಾಗೂ ಕಾರ್ಯದರ್ಶಿಗಳು ಜುನೈದ್ ಕಾಯಾರ್ ,ಕಬೀರ್ ತೋಟಾಲ್ ಸಹಿತ 13 ಮಂದಿಯನ್ನೊಳಗೊಂಡ ಹೊಸಸಮಿತಿ ರಚಿಸಲಾಯಿತು.
ಅಝೀಝ್ ಹನೀಫಿ ಸ್ವಾಗತಿಸಿ, ನೂತನ ಪ್ರ.ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಧನ್ಯವಾದಸಲ್ಲಿಸಿದರು.

error: Content is protected !! Not allowed copy content from janadhvani.com