ಮೌಲಾನಾ ಶಾಫಿ ಸಆದಿ
ಮಾಜಿ ಅಧ್ಯಕ್ಷರು,ವಕ್ಫ್ ಬೋರ್ಡ್ ಹಾಲಿ ಸದಸ್ಯರು ಕರ್ನಾಟಕ ರಾಜ್ಯ ಸರ್ಕಾರ.
ಒಂದೊಂದು ಮತಗಳಿಗೂ ಮೌಲ್ಯವಿದೆ, ನಿಮ್ಮ ಊರಿನ ,ರಾಜ್ಯದ ,ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಂದು ಮತ ಕೂಡಾ ಮೌಲ್ಯವುಳ್ಳದ್ದಾಗಿದೆ. ಸಭ್ಯರು, ಪ್ರಾಮಾಣಿಕರು, ದೇಶದ ಸಂಸ್ಕೃತಿ, ಸಂವಿಧಾನ ಗೌರವಿಸುವವರು ಆಯ್ಕೆಯಾಗಬೇಕು. ರಾಜ್ಯದಲ್ಲಿ , ರಾಷ್ಟ್ರ ದಲ್ಲಿ ಶಾಂತಿ ಸೌಹಾರ್ದ ನೆಲೆಗೊಳ್ಳಬೇಕು. ಆದ್ದರಿಂದ ಯಾವುದೇ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೆ, ಯಾರು ಉತ್ತಮ ವ್ಯಕ್ತಿಯಾಗಿ ಕಾಣುತ್ತಾರೋ ಅವರನ್ನು ಆಯ್ಕೆ ಮಾಡಬೇಕು.
ಶಾಂತಿಯಾಂದ ಮತದಾನ ಪ್ರಕ್ರಿಯೆ ನಡೆಯಬೇಕು. ಇಡೀ ಜಗತ್ತೇ ನೋಡುವ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಕ್ರಿಯೆ ಆಗಿದೆ ಭಾರತ ದೇಶದ್ದು. ಅದು ನ್ಯಾಯಯುತವಾಗಿ ಎಲ್ಲರೂ ಪರಸ್ಪರ ಒಕ್ಕೊರಳ ಸಹಕಾರದಿಂದ ನಡೆಯಬೇಕು. ಮುಖ್ಯವಾಗಿ ನಿಮ್ಮ ಪರಿಸರ, ಗ್ರಾಮ, ಸುತ್ತಮುತ್ತಲು ಪ್ರತಿಯೊಬ್ಬರೂ ಚುನಾವಣಾ ಮತದಾನ ಪ್ರಕ್ರಿಯೆಯಲ್ಲಿ ತೋಡಗಿಸುವಂತೆ ನೋಡಿಕೊಳ್ಳಬೇಕು. ಅಲ್ಲಾಹು ತೌಫೀಕ್ ನೀಡಲಿ ಆಮೀನ್..