janadhvani

Kannada Online News Paper

ಮತದಾನವನ್ನು ಯಾರೂ ತಪ್ಪಿಸಿಕೊಳ್ಳಬಾರದು: ಕರ್ನಾಟಕ ಮುಸ್ಲಿಂ ಜಮಾಅತ್

17ನೆ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕದ 14 ಲೋಕ ಸಭಾ ಕ್ಷೇತ್ರಗಳಲ್ಲಿ ಎಪ್ರಿಲ್ 26ರಂದು ಮತದಾನ ನಡೆಯಲಿದೆ.

ದೇಶದ ಪ್ರಜಾಪ್ರಭುತ್ವದ ಉಳಿಯುವಿಕೆಯಲ್ಲಿ ನಿರ್ಣಾಯಕ ಚುನಾವಣೆ ಎಂದೇ ವಿಶ್ಲೇಷಿಸಲ್ಪಡುತ್ತಿರುವ ಈ ಬಾರಿಯ ಮತದಾನವನ್ನು ಯಾರೂ ತಪ್ಪಿಸಿಕೊಳ್ಳಬಾರದು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಮನವಿ ಮಾಡಿದೆ.

ಶುಕ್ರವಾರದ ಜುಮಾ ನಮಾಜ್ ಗೆ ಸಂಬಂಧಿಸಿ ಉಲಮಾಗಳ ಸೂಚನೆ ಗಳನ್ನು ಪಾಲಿಸಿ ಮತದಾನ ಮಾಡುವಂತೆ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಕಟಣೆಯಲ್ಲಿ ವಿನಂತಿಸಿದೆ. ದೇಶದ ಸಂವಿಧಾನದ ಮೇಲೆ ಪ್ರಹಾರ ಮಾಡಲು ಫ್ಯಾಸಿಸ್ಟ್ ಶಕ್ತಿ ಗಳು ಹೊಂಚು ಹಾಕುತ್ತಿರುವ ಸಂಕಷ್ಟ ಕಾಲದಲ್ಲಿ ನಮ್ಮ ಪ್ರತಿಯೊಂದು ಮತವು ಅಮೂಲ್ಯವಾದುದು ಎಂಬುದನ್ನು ಮನಗಾಣಬೇಕು ಎಂದು ಪ್ರಕಟಣೆ ತಿಳಿಸಿದೆ.