janadhvani

Kannada Online News Paper

ಮತದಾನದಲ್ಲಿ ಸರ್ವರೂ ಸಂಪೂರ್ಣವಾಗಿ ಭಾಗವಹಿಸಲು ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಕರೆ

ಲೊಕಸಭೆಗೆ ನಡೆಯುತ್ತಿರುವ ಮಹಾ ಚುನಾವಣೆಯು ಭಾರತದ ಭವಿಷ್ಯತ್ತನ್ನು ನಿರ್ಣಯಿಸುವ ಚುನಾವಣೆಯಾಗಿರುವುದರಿಂದ ಪ್ರತಿಯೊಬ್ಬರ ಹಕ್ಕಾದ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಹಕ್ಕು ಚಲಾಯಿಸಬೇಕು.

ಎಪ್ರಿಲ್ 26 ಮತ್ತು ಮೇ 7 ದಿನಾಂಕಗಳಲ್ಲಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಆ ದಿನಗಳಲ್ಲಿ ಇತರ ಯಾವುದೇ ಕಾರ್ಯಕ್ರಮಗಳನ್ನಿಡದೇ ಸಂಪೂರ್ಣವಾಗಿ ಮತದಾನದಲ್ಲಿ ಭಾಗವಹಿಸಬೇಕು ಹಾಗೂ ಸಖಾಫಿ ವಿದ್ವಾಂಸರೆಲ್ಲರೂ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕೆಂದು.

ದಿನಾಂಕ17/04/2024 ರಂದು ಮಂಗಳೂರು ಅಡ್ಯಾರು ಕಣ್ಣೂರು ಸಖಾಫಿ ಕೌನ್ಸಿಲ್ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಕರೆ ಕೊಡಲಾಯಿತು.

ರಾಜ್ಯಾಧ್ಯಕ್ಷ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆಕೆಎಂ ಕಾಮಿಲ್ ಸಖಾಫಿಯವರು ಸ್ವಾಗತಿಸಿ ಹಾಮೀಮ್ ತಂಙಳ್ ದುಆ ನಿರ್ವಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ,ಕೋಶಾಧಿಕಾರಿ ಸತ್ತಾರ್ ಸಖಾಫಿ ಬೆಳ್ಳಾರೆ ರಶೀದ್ ಸಖಾಫಿ ಮಜೂರು, ಕಾರ್ಯದರ್ಶಿಗಳಾದ ಸತ್ತಾರ್ ಸಖಾಫಿ ಅಡ್ಯಾರು ಪದವು, ಬೇಂಗಿಲ ಮುಸ್ತಫಾ ಸಖಾಫಿ ಶಾಫಿ ಸಖಾಫಿ ಕೊಕ್ಕಡ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com