janadhvani

Kannada Online News Paper

ಪರವಾನಿಗೆ ರಹಿತ ಹಜ್ ನಿರ್ವಹಿಸುವುದು ಧಾರ್ಮಿಕವಾಗಿ ಸಮ್ಮತವಲ್ಲ- ಸೌದಿ ಉನ್ನತ ವಿದ್ವಾಂಸರ ಮಂಡಳಿ

ಪರವಾನಿಗೆಯನ್ನು ಪಡೆಯದೆ ಹಜ್ ಯಾತ್ರೆಗೆ ಪ್ರಯತ್ನಿಸುವುದು ಧಾರ್ಮಿಕವಾಗಿ ಅನುಮತಿಸುವುದಿಲ್ಲ ಮತ್ತು ಹಾಗೆ ಮಾಡುವವರು ಪಾಪಿಗಳು ಎಂದು ಸುಪ್ರೀಂ ಕೌನ್ಸಿಲ್ ಆಫ್ ಸ್ಕಾಲರ್ಸ್ ಸ್ಪಷ್ಟಪಡಿಸಿದೆ.

ಜಿದ್ದಾ: ಪರವಾನಿಗೆ ಇಲ್ಲದೆ ಹಜ್ ನಿರ್ವಹಿಸುವುದು ಧಾರ್ಮಿಕವಾಗಿ ಸಮ್ಮತವಲ್ಲ ಎಂದು ಸೌದಿಯ ಉನ್ನತ ವಿದ್ವಾಂಸರ ಮಂಡಳಿ ಹೇಳಿದೆ. ಯಾತ್ರಾರ್ಥಿಗಳ ವಿಪರೀತವನ್ನು ನಿಯಂತ್ರಿಸಲು ಮತ್ತು ಅಗತ್ಯ ಸೇವೆಗಳನ್ನು ಒದಗಿಸಲು ಪರವಾನಗಿಯನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತಗಾರರು ನಿಗದಿಪಡಿಸಿದ ನಿಯಮಾವಳಿಗಳನ್ನು ಅನುಸರಿಸಲು ಎಲ್ಲರೂ ಸಿದ್ಧರಾಗಿರಬೇಕು ಎಂದು ವಿದ್ವಾಂಸರ ಮಂಡಳಿ ಆಗ್ರಹಿಸಿದೆ.

ಗೃಹ ಸಚಿವಾಲಯ, ಹಜ್ ಮತ್ತು ಉಮ್ರಾ ಸಚಿವಾಲಯ ಮತ್ತು ಎರಡೂ ಹರಂ ನಿರ್ವಹಣೆ ಕಚೇರಿ ಪ್ರಾಧಿಕಾರದ ನಡುವಿನ ಚರ್ಚೆಯ ನಂತರ ಪರವಾನಿಗೆ ಇಲ್ಲದೆ ಹಜ್ ಮಾಡುವ ಧಾರ್ಮಿಕ ತೀರ್ಪಿನ ಕುರಿತು ಸುಪ್ರೀಂ ಕೌನ್ಸಿಲ್ ಹೇಳಿಕೆಯನ್ನು ನೀಡಿತು. ಪರವಾನಿಗೆಯನ್ನು ಪಡೆಯದೆ ಹಜ್ ಯಾತ್ರೆಗೆ ಪ್ರಯತ್ನಿಸುವುದು ಧಾರ್ಮಿಕವಾಗಿ ಅನುಮತಿಸುವುದಿಲ್ಲ ಮತ್ತು ಹಾಗೆ ಮಾಡುವವರು ಪಾಪಿಗಳು ಎಂದು ಸುಪ್ರೀಂ ಕೌನ್ಸಿಲ್ ಆಫ್ ಸ್ಕಾಲರ್ಸ್ ಸ್ಪಷ್ಟಪಡಿಸಿದೆ.

ಪರ್ಮಿಟ್‌ಗಳ ಸಂಖ್ಯೆಯನ್ನು ಆಧರಿಸಿ, ಯಾತ್ರಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸೇವೆಗಳಾದ ಸುರಕ್ಷತೆ, ಆರೋಗ್ಯ, ವಸತಿ, ಆಹಾರ ಇತ್ಯಾದಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ತಮ್ಮ ಕರ್ತವ್ಯಗಳನ್ನು ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವುದನ್ನು ಇದು ಖಚಿತಪಡಿಸುತ್ತದೆ. ಈ ನಿಯಮಗಳು ಷರಿಯಾ ಕಾನೂನನ್ನು ಆಧರಿಸಿವೆ. ಇಂತಹ ನಿಯಮಗಳ ಮೂಲಕ ಯಾತ್ರಿಕರ ನೂಕುನುಗ್ಗಲು ಮತ್ತು ಟ್ರಾಫಿಕ್ ಜಾಮ್ ಅನ್ನು ನಿಯಂತ್ರಿಸಲು ಮತ್ತು ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆ.

ಆದರೆ ಪರವಾನಿಗೆ ಇಲ್ಲದೆ ಹಜ್ ಯಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳಿಂದ ಅಧಿಕಾರಿಗಳ ಲೆಕ್ಕಾಚಾರ ತಪ್ಪಿ ನಿಯಮಾವಳಿಗಳು ತಪ್ಪುತ್ತವೆ. ಇದು ಭಾರಿ ಅನಾಹುತಕ್ಕೆ ಕಾರಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತಗಾರರು ವಿಧಿಸಿರುವ ಇಂತಹ ನಿರ್ಬಂಧಗಳನ್ನು ಅನುಸರಿಸಲು ಎಲ್ಲರೂ ಸಿದ್ಧರಾಗಿರಬೇಕು ಎಂದು ವಿದ್ವಾಂಸರ ಮಂಡಳಿ ಹೊರಡಿಸಿದ ಪ್ರಕಟಣೆಯಲ್ಲಿ ಕೋರಲಾಗಿದೆ.

error: Content is protected !! Not allowed copy content from janadhvani.com