ಎಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಬಾಗಲಕೋಟೆ ಜಿಲ್ಲಾ ಸಮಾವೇಶವು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ಅಧ್ಯಕ್ಷತೆಯಲ್ಲಿ ಇಳಕಲ್ ಸಯ್ಯಿದ್ ಮುರ್ತಝಾ ದರ್ಗಾ ಸಭಾಂಗಣದಲ್ಲಿ ನಡೆಯಿತು.
ನೂತನ ಜಿಲ್ಲಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ನಾಸಿರ್ ಕರ್ನೂಲ್ ಇಳಕಲ್, ಪ್ರಧಾನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಯೂನುಸ್ ಮುದುಗಲ್, ಕೋಶಾಧಿಕಾರಿ ಯಾಗಿ ಮುಹಮ್ಮದ್ ಯೂಸುಫ್, ಉಪಾಧ್ಯಕ್ಷ ರಾಗಿ ಹಾಜಿ ಮಲಂಗ್ ಬಂಡಾರಿ ಸಾಬ್, ಹಾಜಿ ದಾದಾಪೀರ್ ಹನುಮಾಸಾಗರ್, ಕಾರ್ಯದರ್ಶಿಗಳಾಗಿ ಅಬ್ದುಲ್ಲತೀಫ್ ಫನೀಬಂದ್, ಮಹ್ಬೂಬ್ ಖತೀಬ್ ಹುನಗುಂದ ಹಾಗೂ ಹನ್ನೊಂದು ಮಂದಿ ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು


ಸಮಾರಂಭದಲ್ಲಿ ಟೀಮ್ ಇಸಾಬಾ ನಿರ್ದೇಶಕ ಉಮರ್ ಸಖಾಫಿ ಎಡಪ್ಪಾಲ್, ಹಾವೇರಿ ಮುಈನುಸ್ಸುನ್ನಃ ಕಾರ್ಯದರ್ಶಿ ಕೆ.ಎಂ.ಮುಸ್ತಫಾ ನಈಮಿ , ಇಳಕಲ್ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಉಸ್ಮಾನ್ ಗನಿ ಮುಂತಾದವರು ಭಾಷಣ ಮಾಡಿದರು. ಮುಹಮ್ಮದ್ ಯೂನುಸ್ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು…