janadhvani

Kannada Online News Paper

2024 ಎಪ್ರಿಲ್ 26 ರಿಂದ ಮೇ 3 ರ ತನಕ ಎಮ್ನೆಮ್ಮಾಡ್ ಮಖಾಂ ಉರೂಸ್

ಇತಿಹಾಸ ಪ್ರಸಿದ್ಧ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕು ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಹಜ್ರತ್ ಸೂಫಿ ಶಹೀದ್ ಮತ್ತು ಹಜ್ರತ್ ಸೈಯದ್ ಹಸನ್ ಸಕಾಫ್ ಹಾಗೂ ಇನ್ನಿತರ ಪ್ರಮುಖ ಮಹಾತ್ಮರುಗಳ ಹೆಸರಿನಲ್ಲಿ ಪ್ರತಿ ವರ್ಷ ನಡೆಸುವ ಉರೂಸ್ ಕಾರ್ಯಕ್ರಮ ಈ ವರ್ಷವು ಅತಿ ವಿಜ್ರಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ದಿನಾಂಕ 26 ಎಪೀಲ್ 2024 ರಿಂದ ಮೇ 3 ತನಕ ಈ ವರ್ಷದ ಉರೂಸ್ ಕಾರ್ಯಕ್ರಮ ನಡೆಸುವುದಾಗಿ ಸಮಿತಿಯು ತಿಳಿಸಿರುತ್ತಾರೆ.

ಎಪ್ರಿಲ್ 26 ರಂದು ಕಾರ್ಯಕ್ರಮ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಪ್ರಾರಂಭಗೊಳ್ಳಲಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ಸೈಯ್ಯದ್ ಝೈನುಲ್ ಆಬಿದೀನ್ ಜಫ್ರಿ ತಂಙಳ್ ನೇತೃತ್ವ ವಹಿಸುವರು . ದಿನಾಂಕ 29 ಸೋಮವಾರ ಸಾರ್ವಜನಿಕ ಸಮ್ಮೇಳನ ನಡೆಯುತ್ತಿದೆ.

ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಆಟಕೋಯ ತಂಙಳ್ ಕುಂಬೋಳ್ ವಹಿಸುವರು. ಸಮ್ಮೇಳನ ಸೈಯ್ಯದ್ ಮುಈನಲಿ ಶಿಹಾಬ್ ತಂಙಳ್ ಪಾಲಕ್ಕಾಡ್ ಉದ್ಘಾಟನೆ ನೆರವೇರಿಸುವರು. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹಾಗೂ ಮೌಲಾನ ಶಾಫಿ ಸಅದಿ ಬೆಂಗಳೂರು ಧಾರ್ಮಿಕ ಪ್ರವಚನ ನೀಡಿವರು.

ವೇದಿಕೆಯಲ್ಲಿ
ಜಮೀರ್ ಅಹ್ಮದ್ (ಸಚಿವರು ವಕ್ಫ್ ಮಂಡಳಿ ಕರ್ನಾಟಕ)
ಶಾಸಕರಾದ ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಅನ್ವರ್ ಪಾಶ (ಚೇರ್ಮನ್ ವಕ್ಫ್ ಮಂಡಳಿ ಕರ್ನಾಟಕ)
ಇನ್ನಿತರ ಧಾರ್ಮಿಕ ರಾಜಕೀಯ, ಸಾಂಸ್ಕೃತಿಕ ನೇತಾರರು ಭಾಗವಹಿಸುವರು ಅದೇ ದಿನ ಭಕ್ತಾಧಿಗಳಿಗೆ ಅನ್ನದಾನವಿರುತ್ತದೆ.
ದಿನಾಂಕ 3 ಮೇ 2024 ಸಮಾರೋಪ ಸಮಾರಂಭದಲ್ಲಿ ಬದುರುಸ್ಸಾದಾತ್ ಇಬ್ರಾಹಿಂ ಖಲೀಲ್ ತಂಙಳ್ ವಹಿಸುವರು.

ಕಾರ್ಯಕ್ರಮದ ವಿವರವನ್ನು ಪತ್ರಕಾ ಸಮ್ಮೇಳನದ ಮೂಲಕ ಸೈಯಿದ್ ಝಕರಿಯ ಸಅದಿ, ನಿಝಾರ್ ಜಾಹರಿ , ಜುಬೈರ್ ಸಿಎ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ಉಪಾಧ್ಯಕ್ಷ ರಾದ ಅಶ್ರಫ್ ಕಿನಾರ ತಿಳಿಸಿದರು.

error: Content is protected !! Not allowed copy content from janadhvani.com