janadhvani

Kannada Online News Paper

ಇಡಿಯ ವಿರೋಧ ಪಕ್ಷ ಬೇಟೆಯನ್ನು ಖಂಡಿಸಿದ ಎನ್ ಡಿ ಎ ಸಂಸದ

ಮುಂಬೈ: ಇಡಿಯು ವಿರೋಧ ಪಕ್ಷದ ವರನ್ನು ಭೇಟೆಯಾಡುವುದು ಸಮಂಜಸವಲ್ಲ ಎಂದು ಎನ್‌ಡಿಎ ಹಾಲಿ ಸಂಸದ ಮತ್ತು ಶಿವಸೇನೆ ಏಕನಾಥ್ ಶಿಂಧೆ ಬೆಂಬಲಿಗ ಗಜಾನನ ಕೀರ್ತಿಕರ್ ಹೇಳಿದ್ದಾರೆ. ಪುತ್ರನ ವಿರುದ್ಧದ ಇಡಿ ತನಿಖೆ ಬಳಿಕ ಮೈತ್ರಿ ಬಿಜೆಪಿಯ ಬೇಟೆ ರಾಜಕೀಯದ ವಿರುದ್ಧ ಕೀರ್ತಿಕರ್ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಮೋದಿ ಸಾಕಷ್ಟು ಕೆಲಸ ಮಾಡಿದ್ದಾರೆ. ಬಿಜೆಪಿಗೆ ಮತ ಬರಲು ಇಷ್ಟು ಸಾಕು. ಇಡಿ ಸೇರಿದಂತೆ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಬೇಟೆಯಾಡುವುದು ತಪ್ಪು. ಇದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.

ಅವರ ಪುತ್ರ ಹಾಗೂ ಮುಂಬೈ ವಾಯುವ್ಯ ಕ್ಷೇತ್ರದ ಶಿವಸೇನೆ ಉದ್ಧವ್ ಪಕ್ಷ ಅಭ್ಯರ್ಥಿ ಅಮೋಲ್ ಕೀರ್ತಿಕರ್ ವಿರುದ್ಧ ಇಡಿ ಕ್ರಮ ಕೈಗೊಂಡಿರುವುದೇ ಅವರು ಕುಪಿತಗೊಳ್ಳಲು ಕಾರಣ ಎನ್ನಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿಯು ಜಾರಿ ನಿರ್ದೇಶನಾಲಯವನ್ನು (ಇಡಿ) ದುರ್ಬಳಕೆ ಮಾಡಿಕೊಂಡಿದೆ ಎಂಬ ಟೀಕೆ ಕೇಳಿ ಬರುತ್ತಿರುವ ಮಧ್ಯೆ ಮೈತ್ರಿ ಪಕ್ಷ ದ ಸಂಸದರೊಬ್ಬರು ವಿರೋಧ ಪಕ್ಷಗಳಿಗೆ ಪೂರಕವಾಗಿ ಹೇಳಿಕೆ ಕೊಟ್ಟಿರುವುದು ಮಹತ್ವ ಪಡೆದಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮುಂಬೈ ಕಾರ್ಪೊರೇಷನ್‌ಗೆ ಕಿಚಡಿ ವಿತರಣೆಗೆ ಸಂಬಂಧಿಸಿದ ಒಪ್ಪಂದದಲ್ಲಿ ಕೋಟ್ಯಂತರ ಭ್ರಷ್ಟಾಚಾರದ ಆರೋಪದ ಮೇಲೆ ಅಮೋಲ್ ಕೀರ್ತಿಕರ್ ಅವರನ್ನು ಇಡಿ ಹಲವಾರು ಬಾರಿ ವಿಚಾರಣೆಗೆ ಒಳಪಡಿಸಿತ್ತು.

ಶಿವಸೇನೆ ಇಬ್ಭಾಗವಾದಾಗ ಮುಂಬೈ ವಾಯವ್ಯ ಸಂಸದ ಗಜಾನನ ಕೀರ್ತಿಕರ್ ಶಿಂಧೆ ಬಣದ ಜೊತೆ ಹೋಗಿದ್ದರು. ಆದರೆ, ಅವರ ಪುತ್ರ ಅಮೋಲ್ ಕೀರ್ತಿಕರ್ ಉದ್ಧವ್ ಪರವಾಗಿಯೇ ಉಳಿದಿದ್ದರು. ಉದ್ಧವ್ ಅವರ ಕಡೆಯವರು ಅಮೋಲ್ ರನ್ನು ಅವರ ತಂದೆ ಕಳೆದ ಬಾರಿ ಸ್ಪರ್ಧಿಸಿದ್ದ ಕ್ಷೇತ್ರ ದಲ್ಲಿ ಕಣಕ್ಕಿಳಿಸಿದಾಗ ಇಡಿ ತನ್ನ ಕ್ರಮವನ್ನು ಹೆಚ್ಚಿಸಿತು ಎಂದು ಆರೋಪಿಸಲಾಗಿದೆ . ಕಳೆದ ವಾರ ಅಭ್ಯರ್ಥಿ ಅಮೋಲ್ ನನ್ನು 6 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿತ್ತು.

error: Content is protected !! Not allowed copy content from janadhvani.com