ಕುಂದಾಪುರ: ನಮ್ಮ ನಾಡ ಒಕ್ಕೂಟ (ರಿ )ಕಮ್ಯುನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ , ವಿದ್ಯಾರ್ಥಿಗಳಿಗೆ ಹಾಗು ಪೋಷಕರಿಗೆ ತರಬೇತಿ ಕಾರ್ಯಕ್ರಮ ಕುಂದಾಪುರ ದ ಕಮ್ಯುನಿಟಿ ಸೆಂಟರ್ ನ ಮಿನಿ ಹಾಲ್ ನಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಕಮ್ಯುನಿಟಿ ಸೆಂಟರ್ ಕುಂದಾಪುರ ಇದರ ಅಧ್ಯಕ್ಷ ರು ಸಮಾಜ ಸೇವಕರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ದಲ್ಲಿ ಎನ್ ಎನ್ ಒ ಕೇಂದ್ರ ಸಮಿತಿಯ ಅಧ್ಯಕ್ಷ ರಾದ ಮೊಹಮ್ಮದ್ ಸಲೀಮ್ ಮೂಡಬಿದ್ರೆ, ಟ್ರಸ್ಟ್ ನ ಸದಸ್ಯರಾದ ಪಿರ್ ಸಾಹೇಬ್ ಉಡುಪಿ,ಮೌ ಝಮಿರ್ ಅಹ್ಮದ್ ರಷಾದಿ,ಎನ್ ಎನ್ ಒ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಮುಸ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಸಂಯೋಜಕರಾದ ಶೈಖ್ ವಾಹಿದ್ ಉಡುಪಿ, ಜಿಲ್ಲಾ ಉಪಾಧ್ಯಕ್ಷ ರಾದ ಅಬು ಮೊಹಮ್ಮದ್ ಕುಂದಾಪುರ, ಅಬ್ದುಲ್ ರಶೀದ್ ಕಾಪು, ಸಯ್ಯದ್ ಅಜ್ಮಿಲ್ ಶಿರೂರ್,ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್, ಜಿಲ್ಲಾ ಸಮಿತಿ ಸದಸ್ಯ ರಾದ ಹಾರುನ್ ರಶೀದ್ ಸಾಸ್ತಾನ್,ಉಡುಪಿ ತಾಲೂಕು ಅಧ್ಯಕ್ಷ ರಾದ ನಝಿರ್ ನೆಜಾರ್ ಸದ್ಯಸ್ಯರಾದ ರಿಯಾಜ್ ಉಡುಪಿ, ಅಕ್ರಮ್ ಉಡುಪಿ,ಇನ್ನಿತರರು ಉಪಸ್ಥಿತರಿದ್ದರು.
ಟ್ರಸ್ಟ್ ನ ಸದಸ್ಯ,ಕಮ್ಯುನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಎನ್ ಎನ್ ಒ ಹೆಬ್ರಿ ಘಟಕದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು, ಕಮ್ಯುನಿಟಿ ಸೆಂಟರ್ ನ ಖಜಾಂಚಿ ಎಸ್ ಅನ್ವರ್ ಕಂಡ್ಲೂರ್ ಧನ್ಯವಾದ ನೀಡಿದರು.