janadhvani

Kannada Online News Paper

ತಾಜುಲ್ ಉಲಮಾ ಉರೂಸ್ ನ ಯಶಸ್ವಿಗೆ ಎಸ್.ವೈ.ಎಸ್ ದ.ಕ ಜಿಲ್ಲಾ ಸಮಿತಿ ಕರೆ

ಮಂಗಳೂರು:ಸುಮಾರು 7 ದಶಕ ಗಳ ತನಕ ದಕ್ಷಿಣ ಕರ್ನಾಟಕದ ಉಳ್ಳಾಲದಲ್ಲಿ ಬಂದು ದೀನೀ ಪ್ರಭೋದನೆಯೊಂದಿಗೆ ರಾಷ್ಟ್ರಾದ್ಯಂತ ಅಹ್ಲು ಸುನ್ನತ್ ವಲ್-ಜಮಾಅತ್ ನೆಲೆಯೂರಲು ಕಾರಣಕರ್ತರಾದ ಆಧ್ಯಾತ್ಮಿಕ ನಾಯಕ ಮರ್ಹೂಂ ಸಯ್ಯದ್ ತಾಜುಲ್ ಉಲಮಾ ಅಬ್ದುರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿರವರ 5 ನೇ ಉರೂಸ್ ಡಿಸೆಂಬರ್ 7,8,9 ಎಂಬೀ ದಿನಾಂಕಗಳಲ್ಲಿ ಎಟ್ಟಿಕುಲಂನಲ್ಲಿ ನಡೆಯುತ್ತದೆ.
ಉನ್ನತ ಸಾದಾತ್ ಗಳು,ಉನ್ನತ ಉಲಮಾ,ಉಮರಾ ನೇತಾರರು,ಸಂಘಟನಾ ನಾಯಕರು ಭಾಗವಹಿಸುವ ಈ ಉರೂಸ್ ಕಾರ್ಯಕ್ರಮಕ್ಕೆ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಸುನ್ನೀ ಕುಟುಂಬದ ನಾಯಕರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಎಸ್.ವೈ.ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com