janadhvani

Kannada Online News Paper

ದೇವರ ಹೆಸರಿನಲ್ಲಿ ಮತ ಯಾಚನೆ: ಮೋದಿಯವರನ್ನು ಅನರ್ಹಗೊಳಿಸುವಂತೆ ಅರ್ಜಿ- ನಾಳೆ ವಿಚಾರಣೆ

ಮೋದಿಯವರ ಚುನಾವಣಾ ಭಾಷಣಗಳು ಧಾರ್ಮಿಕ ಮತ್ತು ಜಾತಿ ದ್ವೇಷವನ್ನು ಹುಟ್ಟುಹಾಕುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣೆಯಿಂದ ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಾಳೆ ನಡೆಸಲಿದೆ. ಮೋದಿಯನ್ನು 6 ವರ್ಷಗಳ ಕಾಲ ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಆನಂದ್ ಎಸ್. ಜೊಂಡಲೆ ಎಂಬ ವಕೀಲರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಮೋದಿ ಅವರು ದೇವರು ಮತ್ತು ಪೂಜಾ ಸ್ಥಳದ ಹೆಸರಿನಲ್ಲಿ ಮತ ಯಾಚಿಸಿದ್ದಾರೆ.ಅವರ ಚುನಾವಣಾ ಭಾಷಣಗಳು ಧಾರ್ಮಿಕ ಮತ್ತು ಜಾತಿ ದ್ವೇಷವನ್ನು ಹುಟ್ಟುಹಾಕುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಏಪ್ರಿಲ್ 9 ರಂದು ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾಡಿದ ಭಾಷಣವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಚುನಾವಣಾ ಪ್ರಚಾರಕ್ಕೆ ದೇವರು ಅಥವಾ ಪೂಜಾ ಸ್ಥಳಗಳನ್ನು ಬಳಸಬಾರದು ಎಂಬ ನಿಯಮವನ್ನು ಮೋದಿಯವರ ಭಾಷಣ ಉಲ್ಲಂಘಿಸಿದೆ ಎಂಬುದು ಅರ್ಜಿಯಲ್ಲಿನ ಪ್ರಮುಖ ವಾದವಾಗಿದೆ. ಮೋದಿ ಅವರು ಚುನಾವಣಾ ಭಾಷಣಗಳಲ್ಲಿ ನಿರಂತರವಾಗಿ ಧರ್ಮ ಮತ್ತು ಜಾತಿಯನ್ನು ಬಳಸುತ್ತಿದ್ದಾರೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

error: Content is protected !! Not allowed copy content from janadhvani.com