janadhvani

Kannada Online News Paper

ಶೈಖುನಾ ತಾಜುಲ್ ಉಲಮಾ ಉರೂಸ್ ನ ಯಶಸ್ವಿಗೆ ಎಸ್ಸೆಸ್ಸೆಫ್ ದ. ಕ. ಜಿಲ್ಲಾ ಸಮಿತಿ ಮನವಿ

ಮಂಗಳೂರು: ಸುಮಾರು ಏಳು ದಶಕಗಳ ಕಾಲ ದಕ್ಷಿಣ ಕರ್ನಾಟಕದ ಉಳ್ಳಾಲದಲ್ಲಿ ಬಂದು ದೀನೀ ಪ್ರಭೋದನೆಯೊಂದಿಗೆ ರಾಷ್ಟ್ರಾದ್ಯಂತ ಅಹ್ಲು ಸುನ್ನತ್ ವಲ್-ಜಮಾಅತ್ ನೆಲೆಯೂರಲು ಕಾರಣಕರ್ತರಾದ ಆಧ್ಯಾತ್ಮಿಕ ನಾಯಕ ಮರ್ಹೂಂ ಶೈಖುನಾ ಅಸ್ಸಯ್ಯದ್ ತಾಜುಲ್ ಉಲಮಾ ಅಬ್ದುರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿರವರ 5 ನೇ ಉರೂಸ್ ಡಿಸೆಂಬರ್ 7,8,9 ರಂದು ದಿನಾಂಕಗಳಲ್ಲಿ ಎಟ್ಟಿಕುಲಂನಲ್ಲಿ ನಡೆಯುತ್ತದೆ. ಉನ್ನತ ಸಾದಾತ್ ಗಳು,ಉನ್ನತ ಉಲಮಾ,ಉಮರಾ ನೇತಾರರು,ಸಂಘಟನಾ ನಾಯಕರು ಭಾಗವಹಿಸುವ ಈ ಉರೂಸ್ ಕಾರ್ಯಕ್ರಮಕ್ಕೆ ಜಿಲ್ಲೆಯ ಸುನ್ನೀ ಕುಟುಂಬದ ನಾಯಕರು, ಕಾರ್ಯಕರ್ತರು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ದ. ಕ. ಜಿಲ್ಲಾ ಸಮಿತಿ ಮನವಿ ಮಾಡಿದೆ.

ಎಟ್ಟಿಕ್ಕುಳಂ ಉರೂಸ್ ಕಡ್ಡಾಯವಾಗಿಯೂ ವಿಜಯ ಗೊಳಿಸಲೇ ಬೇಕು. ಯಾಕೆಂದರೆ ನಮಗೆ ವಿಳಾಸ ಮಾಡಿ ಕೊಟ್ಟ ಧೀಮಂತ ನಾಯಕರಾಗಿದ್ದಾರೆ ಶೈಖುನಾ ತಾಜುಲ್ ಉಲಮಾ. ಒಂದು ವೇಳೆ ತಾಜುಲ್ ಉಲಮಾ ಇಲ್ಲದಿರುತ್ತಿದ್ದರೆ ನಮಗೆ ವಿಳಾಸವೇ ಇರುತ್ತಿರಲಿಲ್ಲ. ವಿರೋಧಿಗಳ ಎಲ್ಲಾ ಕುತಂತ್ರಗಳು ಮತ್ತು ವಿರೋಧಿಗಳನ್ನು ಬಗ್ಗುಬಡಿದು ಉರೂಸ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿಸುವುದು ಕರ್ನಾಟಕದ ಕಾರ್ಯಕರ್ತರಾದ ನಮ್ಮ ಜವಾಬ್ದಾರಿಯಾಗಿದೆ.

ಉರೂಸ್ ಪ್ರಯುಕ್ತ ಡಿಸೆಂಬರ್ 7 ಶುಕ್ರವಾರ ಬೆಳಿಗ್ಗೆ 7:00 ಗಂಟೆಗೆ ಉಳ್ಳಾಲ ಸಯ್ಯದ್ ಮದನಿ ಝಿಯಾರತ್ ನೊಂದಿಗೆ ಮನಮೋಹಕವಾದ ವಾಹನ ಜಾಥಾವು ಹಲವಾರು ಸಾದಾತುಗಳ ಉಲಮಾ ಉಮಾರಗಳ ನೇತೃತ್ವದಲ್ಲಿ ಎಟ್ಟಿಕುಲಂಗೆ ಹೊರಡಲಿದೆ. ಸುನ್ನೀ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಶುಕ್ರವಾರ ಬೆಳಿಗ್ಗೆ 6:30 ಗಂಟೆಗೆ ಉಳ್ಳಾಲ ಸಯ್ಯದ್ ಮದನಿ ದರ್ಗಾ ವಠಾರಕ್ಕೆ ವಾಹನಗಳೊಂದಿಗೆ ಬಂದು ಸಹಕರಿಸುವಂತೆ ಎಸ್ಸೆಸ್ಸೆಫ್ ದ. ಕ. ಜಿಲ್ಲಾ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

*ಅಧ್ಯಕ್ಷರು ಮತ್ತು ಸರ್ವ ಸದಸ್ಯರು*
SSF ದ. ಕ. ಜಿಲ್ಲಾ ಸಮಿತಿ

error: Content is protected !! Not allowed copy content from janadhvani.com