ಮಂಗಳೂರು, ಡಿ.3: ಅನಿವಾಸಿ ಕನ್ನಡಿಗರ ಅಂತಾರಾಷ್ಟ್ರೀಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ಕೆಸಿಎಫ್-ಎಸ್ಸೆಸ್ಸೆಫ್-ಎಸ್‌ವೈಎಸ್ ವತಿಯಿಂದ ಸೋಮವಾರ ನಗರದಲ್ಲಿ ನಡೆದ ‘ಕನೆಕ್ಟ್ – 2018 ಸಾಮುದಾಯಿಕ ಸಮ್ಮಿಲನ’ ಕಾರ್ಯಕ್ರಮದಲ್ಲಿ ಹುಬ್ಬುರ್ರಸೂಲ್ ಸಮಾವೇಶದ ಅಂಗವಾಗಿ ಮಧ್ಯಾಹ್ನ 3 ಗಂಟೆಗೆ ಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್. ಸಂಘಟನೆಯ ಇಸಾಬಾ ಟೀಂ, ರೈಟ್ ಟೀಂ, ಟೀಂ ಹಸನೈನ್ ತಂಡಗಳಿಂದ ಇಲಲ್ ಹಬೀಬ್ ಮೀಲಾದ್ ಜಾಥಾ ನಡೆಯಿತು.