janadhvani

Kannada Online News Paper

ಭಾರತೀಯರಿಗೆ ನೀಡಲಾಗುತ್ತಿದ್ದ ವೀಸಾಗಳ ಸಂಖ್ಯೆಯಲ್ಲಿ ಭಾರೀ ಕುಸಿತ

ಕುವೈತ್ ಸಿಟಿ: ಗಲ್ಫ್ ದೇಶಗಳಿಗೆ ಭಾರತೀಯರಿಗೆ ನೀಡಲಾಗುತ್ತಿದ್ದ ವೀಸಾಗಳ ಸಂಖ್ಯೆಯು ಗಣನೀಯವಾಗಿ ಕುಸಿದಿದೆ ಎಂದು ವರದಿಯಾಗಿದೆ.
ಭಾರತೀಯರಿಗೆ ಮೊದಲ ಆದ್ಯತೆ ನೀಡುವ ರಾಷ್ಟ್ರಗಳ ಪಟ್ಟಿಯಲ್ಲಿ ಕುವೈತ್ ಮೂರನೆಯ ಸ್ಥಾನದಲ್ಲಿದೆ, ಪ್ರಥಮ ಸ್ಥಾನದಲ್ಲಿ ಯುಎಇ ಮತ್ತು ಸೌದಿ ಅರೇಬಿಯಾ ಇದೆ.2015 ರಲ್ಲಿ 7.6 ದಶಲಕ್ಷ ವೀಸಾಗಳನ್ನು ನೀಡಲಾಗಿತ್ತು. ಆದರೆ 2017 ರಲ್ಲಿ ಅದು 3.7 ದಶಲಕ್ಷಕ್ಕೆ ಇಳಿಯಿತು.

ಭಾರತೀಯರಿಗೆ ಆದ್ಯತೆ ನೀಡುವುದರಲ್ಲಿ ಮೂರನೇ ಸ್ಥಾನದಲ್ಲಿರುವ ಕುವೈತ್ 2015ರಲ್ಲಿ ಭಾರತೀಯರಿಗೆ 66,543 ವೀಸಾಗಳನ್ನು ಮಂಜೂರು ಮಾಡಿತ್ತು, ಆದರೆ 2016 ರಲ್ಲಿ 72.384 ವೀಸಾಗಳು ಮತ್ತು 2017 ರಲ್ಲಿ ಅದು 56,380 ಕ್ಕೆ ಇಳಿಯುತು.

ಮೊದಲ ಸ್ಥಾನದಲ್ಲಿರುವ ಯುಎಇ 2015 ರಲ್ಲಿ 2.2 ಮಿಲಿಯನ್, 2016 ರಲ್ಲಿ 2.2 ಮಿಲಿಯನ್ ಇದ್ದವು. ಅದು 2017 ರಲ್ಲಿ 1.5 ಮಿಲಿಯನ್‌ಗೆ ಇಳಿಕೆಯಾಗಿದೆ. 2015 ರಲ್ಲಿ ಸೌದಿ ಅರೇಬಿಯಾವು 3 ಮಿಲಿಯನ್, 2016 ರಲ್ಲಿ 1.6 ಮಿಲಿಯನ್ ಮತ್ತು 2017 ರಲ್ಲಿ ಅದು 78,000 ಸಾವಿರಕ್ಕೆ ಇಳಿಯಿತು.

ಓಮಾನ್, ಕತಾರ್ ಮತ್ತು ಬಹ್ರೇನ್ ನಲ್ಲಿರುವ ಭಾರತೀಯರ ಸಂಖ್ಯೆಯಲ್ಲಿಯೂ ಗಮನಾರ್ಹ ಕುಸಿತ ಕಂಡುಬಂದಿದೆ ಎಂದು ರಾಷ್ಟ್ರೀಯ ದಿನಪತ್ರಿಕೆಗಳು ವರದಿ ಮಾಡಿದೆ.

ಅದೇ ವೇಳೆಗೆ, ಕುವೈತ್‌ನಲ್ಲಿನ ಭಾರತೀಯ ರಾಯಭಾರಿ ಜೀವ ಸಾಗರ್ ಇತ್ತೀಚೆಗೆ ಕುವೈತ್ ‌ನ ಸಾಮಾಜಿಕ ಕಾರ್ಮಿಕ ಸಚಿವ ಹಿಂದ್ ಅಲ್ ಸುಬೀಹ್ ಮತ್ತು ಅಲ್ಲಿನ ವಿದೇಶಾಂಗ ಸಹ ಸಚಿವ ಖಾಲಿದ್ ಅಲ್ ಜಾರಲ್ಲಾ ಅವರೊಂದಿಗಿನ ಮಾತುಕತೆ ವೇಳೆ ಭಾರತೀಯರಿಗೆ ನೀಡಲಾಗುತ್ತಿದ್ದ ಆದ್ಯತೆ ಮುಂದುವರಿಯಲಿದೆ ಎಂದಿದ್ದರು.

ಮಾತ್ರವಲ್ಲದೆ, ಜಾರಲ್ಲಾ ಭಾರತೀಯ ರಾಯಭಾರಿಗೆ ನೀಡಲಾದ ಅಭಿನಂದನೆ ಸಮಾರಂಭದಲ್ಲಿ ಭಾರತ ಕುವೈತ್ ಸಂಬಂಧವು  ದೇಶಗಳ ವ್ಯಾಪಾರ, ವ್ಯವಸಾಯ, ತಾಂತ್ರಿಕ, ಆರ್ಥಿಕ , ಕಾರ್ಮಿಕ ವಲಯಗಳಲ್ಲಿ ಮತ್ತಷ್ಟು ಶಕ್ತವಾಗಿ ಮುಂದುವರಿಯಲಿದೆ ಎಂದು ತಿಳಿಸಿದ್ದರು.

ಪ್ರತ್ಯೇಕವಾಗಿ ಭಾರತದಿಂದ ಬಂದ ವಿದೇಶಾಂಗ ಸಹ ಸಚಿವ ಅವರೊಂದಿಗಿನ ಮಾತುಕತೆಗಳು ದ್ವಿ ರಾಷ್ಟ್ರಗಳ ಮಧ್ಯೆ ದೊಡ್ಡ ಮಟ್ಟದ ಸಾಧ್ಯತೆಗಳಿಗೆ ಎಡೆ ಮಾಡಲಿದೆ ಎಂದು ಜಾರಲ್ಲಾ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

error: Content is protected !! Not allowed copy content from janadhvani.com