ಥೈಲ್ಯಾಂಡ್(ಜುಲೈ.07): ಥಾಯ್‌ಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಆರು ಬಾಲಕರ ರಕ್ಷಣೆ ಮಾಡಲಾಗಿದೆ. ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 12 ಮಂದಿಯ ಪೈಕಿ ಆರು ಬಾಲಕರನ್ನು ರಕ್ಷಿಸಲಾಗಿದೆ. 10 ದಿನಗಳ ಬಳಿಕ ಆರು ಬಾಲಕರ ರಕ್ಷಣೆಯಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಥಾಯ್ಲೆಂಡ್ನಲ್ಲಿ ಇತ್ತೀಚೆಗೆ ಪ್ರವಾಹ ಉಂಟಾಗಿತ್ತು. ಗುಹೆಯೊಂದರಲ್ಲಿ ಫುಟ್ಬಾಲ್ ತಂಡದ ಕೋಚ್ ಸೇರಿದಂತೆ 12 ಬಾಲಕರು ಸಿಲುಕಿದ್ದರು. ಗುಹೆಯಲ್ಲಿ ನೀರಿನ ನಡುವೆ ಸಣ್ಣ ಗುಡ್ಡೆಯೊಂದರಲ್ಲಿ ಕಳೆದ 10 ದಿನಗಳಿಂದ ಜೀವ ಕೈಯಲ್ಲಿ ಇರಿಸಿಕೊಂಡು ಬದುಕುತ್ತಿದ್ದರು.ಬ್ರಿಟಿಷ್ ಗುಹೆ ಮತ್ತು ಮುಳುಗು ತಜ್ಞರ ತಂಡ ಕಳೆದ 10 ದಿನಗಳಿಂದ ಗುಹೆಯ ಕತ್ತಲೆಯಲ್ಲಿದ್ದ ಇವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರು ಬಾಲಕರನ್ನು ರಕ್ಷಿಸಿದ್ದು ಉಳಿದ ಬಾಲಕರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.