ರಿಯಾದ್: ಸೌದಿ ಅರೇಬಿಯಾದಲ್ಲಿ ಸ್ಥಳೀಯ ಮತ್ತು ವಿದೇಶಿ ಯಾತ್ರಾರ್ಥಿಗಳಿಗೆ ಹಜ್ ನೋಂದಣಿ ಪ್ರಾರಂಭವಾಗಿದೆ. www.localhaj.haj.gov.sa ವೆಬ್‌ಸೈಟ್ ಮೂಲಕ ಅಥವಾ ನುಸುಕ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಬಹುದು. ವಿಭಿನ್ನ ಶುಲ್ಕಗಳಲ್ಲಿ ಪ್ಯಾಕೇಜ್‌ಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಾಗ ಆಯ್ದ ಪ್ಯಾಕೇಜ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ನಾಲ್ಕು ವಿಭಾಗಗಳ ಹಜ್ ಪ್ಯಾಕೇಜ್‌ಗಳು ವ್ಯಾಟ್ ಸಹಿತ 3,984.75 ರಿಯಾಲ್‌ಗಳು (ಎಕಾನಮಿಕ್), 8092.55 ರಿಯಾಲ್‌ಗಳು (ಮಿನಾ ಟೆಂಟ್), 10366.10 ರಿಯಾಲ್‌ಗಳು (ಹೆಚ್ಚು ಸೌಲಭ್ಯಗಳೊಂದಿಗೆ ಮಿನಾ ಟೆಂಟ್)ಮತ್ತು 13,150.25 ರಿಯಾಲ್‌ಗಳು (ಮಿನಾ ಟವರ್) ಅನ್ನು ಒಳಗೊಂಡಿವೆ.
ಕನಿಷ್ಠ 4,099.75 ರಿಯಾಲ್ ಎಕಾನಮಿ ಪ್ಯಾಕೇಜ್ ನಲ್ಲಿ ಮಿನಾದ ಟೆಂಟ್ ಸೌಲಭ್ಯವನ್ನು ಹೊಂದಿಲ್ಲ. ಅರಾಫಾ ಮತ್ತು ಮುಜ್ದಲಿಫಾದಂತಹ ಪ್ರದೇಶಗಳು ಸೀಮಿತ ಪ್ರಯಾಣ ಮತ್ತು ವಸತಿ ಸೌಲಭ್ಯಗಳನ್ನು ಹೊಂದಿರುತ್ತವೆ.
8,092.55 ರಿಯಾಲ್ ಮತ್ತು 10,366.10 ರಿಯಾಲ್ ಪ್ಯಾಕೇಜ್‌ಗಳು ಮಿನಾ ಮತ್ತು ಅರಾಫಾದಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಟೆಂಟ್, ಆಹಾರ, ಸಾರಿಗೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.13,265.25 ರಿಯಾಲ್‌ಗಳ ಪ್ಯಾಕೇಜ್‌ನಲ್ಲಿ ಮಿನಾದಲ್ಲಿ ವಾಸ್ತವ್ಯವು, ಜಮ್ರಗಳ ಪಕ್ಕದಲ್ಲಿರುವ ಗೋಪುರದ ಕಟ್ಟಡದಲ್ಲಿರಲಿದೆ. ಅರಫಾದಲ್ಲಿ ಪ್ರತ್ಯೇಕ ಟೆಂಟ್‌ಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿರುತ್ತದೆ. ಯಾತ್ರಿಕರು ಮಕ್ಕಾ ತಲುಪುವವರೆಗಿನ ಸಾರಿಗೆ ಶುಲ್ಕವು ನಾಲ್ಕು ಪ್ಯಾಕೇಜ್‌ಗಳಲ್ಲೂ ಲಭ್ಯವಿಲ್ಲ.