ರಿಯಾದ್ ಮೇ 11: (ಜನಧ್ವನಿ ವಾರ್ತೆ) ಕರ್ನಾಟಕ ಕಲ್ಚರಲ್ ಫೌಂಢೇಶನ್ ರಿಯಾದ್ ಝೋನ್ ಅಧೀನದಲ್ಲಿರುವ ಕೆ.ಸಿ.ಎಫ್. ಹರಾ ಯುನಿಟ್ ಇದರ ವಾರ್ಷಿಕ ಕೌನ್ಸಿಲ್ ದಿನಾಂಕ 11-05- 2018 ಶುಕ್ರವಾರ ಜುಮಾ ನಮಾಝಿನ ಬಳಿಕ ಮಧ್ಯಾಹ್ನ 1ಗಂಟೆಗೆ ಸರಿಯಾಗಿ ಯುನಿಟ್ ಅಧ್ಯಕ್ಷರಾದ ಇಸ್ಮಾಯಿಲ್ ಮೊಂಟೆಪದವುರವರ ನಿವಾಸದಲ್ಲಿ ನಡೆಯಿತು. ಸಭೆಯನ್ನು ಹರಾ ಯುನಿಟ್ ಜೊತೆಕಾರ್ಯದರ್ಶಿ ರಝಾಕ್ ಮುಸ್ಲಿಯಾರ್ ನಾಟೆಕಲ್ ರವರು ಉದ್ಘಾಟಿಸಿದರು. ಯುನಿಟ್ ಕಾರ್ಯದರ್ಶಿ ಸಲಾಹುದ್ದೀನ್ ಬಜ್ಪೆ 2017-18 ನೇ ಸಾಲಿನ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.
ಝೋನ್ ನಿಂದ ಚುಣಾವಣಾ ವೀಕ್ಷಕರಾಗಿ ಆಗಮಿಸಿದ್ದ , ಕೆ.ಸಿ.ಎಫ್. ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಬಶೀರ್ ತಲಪಾಡಿ , ಹಾಲಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿ ರಚನೆಯ ನೇತೃತ್ವವನ್ನು ವಹಿಸಿದ್ದರು .
ಈ ಸಂಧರ್ಭದಲ್ಲಿ ಮಾತಾನಾಡಿದ ಕೆ.ಸಿ.ಎಫ್. ರಾಷ್ಟ್ರೀಯ ಸಂಘಟನಾ ವಿಭಾಗದ ಚೇರ್ಮಾನ್ ಸಿಧ್ಧೀಖ್ ಸಖಾಫಿ ಪೆರುವಾಯಿಯವರು ಕಾರ್ಯಕರ್ತರ ಕಾರ್ಯಚಟುವಟಿಕೆ ಹೇಗಿರಬೇಕು ಹಾಗೂ ಸಂಘಟನಾ ಬಲವರ್ಧನೆ ಯಾವ ರೀತಿಯಲ್ಲಾಗಬೇಕೆಂಬುದರ ಕುರಿತು ಸಮಗ್ರವಾಗಿ ವಿವರಿಸಿದರು.
ವೇದಿಕೆಯಲ್ಲಿ ಕೆ.ಸಿ.ಎಫ್. ಸೌದಿ ರಾಷ್ಟೀಯ ಸಂಘಟನಾ ವಿಭಾಗದ ಕನ್ವೀನರ್ ರಮೀಝ್ ಕುಳಾಯಿ, ರಿಯಾದ್ ಝೋನ್ ಸಂಘಟನಾ ವಿಭಾಗದ ಚೆರ್ಮಾನ್ ರಶೀದ್ ಮದನಿ ಉರುವಾಲ್’ಪದವು, ಝೋನ್ ಶಿಕ್ಷಣ ವಿಭಾಗದ ಕನ್ವೀನರ್ ಹಸೈನಾರ್ ಕಾಟಿಪಳ್ಳ, ಝೋನ್ ಸಾಂತ್ವನ ವಿಭಾಗದ ಕನ್ವೀನರ್ ಇಸ್ಮಾಯಿಲ್ ಜೋಗಿಬೆಟ್ಟು, ಝೋನ್ ಅಡ್ಮಿನ್ ವಿಭಾಗದ ಕನ್ವೀನರ್ ಶಮೀರ್ ಜೆಪ್ಪು, ವಲಯ್ಯ ಸೆಕ್ಟರ್ ನಾಯಕ ರಝಾಕ್ ಬಾರ್ಯ ಉಪಸ್ಥಿತಿಯಿದ್ದರು.
ಸಲಾಹುದ್ದೀನ್ ಬಜ್ಪೆ ಸ್ವಾಗತಿಸಿದರೆ, ಇಸ್ಮಾಯಿಲ್ ಮೊಂಟೆಪದವು ವಂದಿಸಿದರು.
ರಶೀದ್ ಮದನಿ ಉರುವಾಲುಪದವು ಕಾರ್ಯಕ್ರಮ ನಿರೂಪಿಸಿದರು.
ನೂತನ ಸಮಿತಿಯ ವಿವರ:
ಅಧ್ಯಕ್ಷರು – ಅಬೂಬಕ್ಕರ್ ಸಾಲೆತ್ತೂರು
ಉಪಾಧ್ಯಕ್ಷರು – ರಝಾಕ್ ಮದನಿ ಕಳಂಜಿಬೈಲ್, ಖಾದರ್ ಸಾಲೆತ್ತೂರು
ಪ್ರಧಾನ ಕಾರ್ಯದರ್ಶಿ – ಇಸ್ಮಾಯಿಲ್ ಮೊಂಟೆಪದವು
ಜೊತೆಕಾರ್ಯದರ್ಶಿ – ರಝಾಕ್ ಮುಸ್ಲಿಯಾರ್ ನಾಟೆಕಲ್, ಶಿಹಾಬ್ ಹಸನ್ ಕಿನ್ಯ
ಕೋಶಾಧಿಕಾರಿ – ಸಾಲಿಂ ಕುಂಜತ್ತೂರು
ಸದಸ್ಯರು:
ನಿಝಾಂ ಸಾಗರ್,ಸಲಾಹುದ್ದೀನ್ ಬಜ್ಪೆ,ಹಸನ್ ಭಾವ ಕಾಟಿಪಳ್ಳ,ಹಮೀದ್ ಮನ್ನಿಪ್ಪಾಡಿಝೋನ್ ಕೌನ್ಸಿಲರ್:
ಅಬೂಬಕ್ಕರ್ ಸಾಲೆತ್ತೂರು,ಇಸ್ಮಾಯಿಲ್ ಮೊಂಟೆಪದವು,ಸಾಲಿಂ ಕುಂಜತ್ತೂರು,ನಿಝಾಂ ಸಾಗರ್
ಖಾದರ್ ಸಾಲೆತ್ತೂರು,ರಝಾಕ್ ಮುಸ್ಲಿಯಾರ್ ನಾಟೆಕಲ್.
ಇನ್ನಷ್ಟು ಸುದ್ದಿಗಳು
ಅಲ್-ಮದೀನತುಲ್ ಮುನವ್ವರ: ಮುಬಾರಕಿಯ್ಯಾ ಮಹಾಸಭೆ
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸೌದಿ: ಒಂದೇ ವಾರದಲ್ಲಿ 20 ಸಾವಿರ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ
ಇಸ್ರೇಲ್- ಯುಎಇ ವೀಸಾ ರಹಿತ ಪ್ರಯಾಣ ಒಪ್ಪಂದ ರದ್ದು
ವಿದ್ಯಾರ್ಥಿ ವೇತನ ಸಮಸ್ಯೆ : ಬ್ಯಾರಿ ಮಹಾಸಭಾ ವೇದಿಕೆಯಿಂದ ಅಲ್ಪಸಂಖ್ಯಾತ ಅಧ್ಯಕ್ಷರ ಭೇಟಿ
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ 2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆ