janadhvani

Kannada Online News Paper

ವಕ್ಫ್ ವಂಚನೆ ಪ್ರಕರಣ: ಕೇರಳ ಮುಸ್ಲಿಂ ಲೀಗ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕಲ್ಲಾಯಿ ಬಂಧನ

ಮೂರು ಕೋಟಿ ಖರ್ಚಾದ ಮಸೀದಿ ನಿರ್ಮಾಣ ಕಾಮಗಾರಿಗೆ ಹತ್ತು ಕೋಟಿ ಖರ್ಚು ಮಾಡಿರುವುದಾಗಿ ಲೆಕ್ಕದಲ್ಲಿ ತೋರಿಸಿರುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಣ್ಣೂರು | ವಕ್ಫ್ ವಂಚನೆ ಪ್ರಕರಣದಲ್ಲಿ ಲೀಗ್ -ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಗಿದೆ. ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕಲ್ಲಾಯಿ,ಲೀಗ್ ನಾಯಕ ಯು ಮಹ್ರೂಫ್ ಮತ್ತು ಕಾಂಗ್ರೆಸ್ ಮುಖಂಡ ಎಂಸಿ ಕುಂಞಹ್ಮದ್ ಎಂಬುವರನ್ನು ಬಂಧಿಸಲಾಗಿದೆ.

ಮಟ್ಟನೂರು ಜುಮಾ ಮಸೀದಿ ನಿರ್ಮಾಣದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖಾ ತಂಡವು ನಿನ್ನೆ ಅಬ್ದುರ್ರಹ್ಮಾನ್ ಕಲ್ಲಾಯಿ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಇತರ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಮಟ್ಟನೂರು ಸಿಐಎಂ ಕೃಷ್ಣನ್ ನೇತೃತ್ವದಲ್ಲಿ ಸಿಐ ಕಚೇರಿಗೆ ಕರೆ ಮಾಡಿ ವಿಚಾರಣೆ ನಡೆಸಿದರು. ಇದರ ಬೆನ್ನಲ್ಲೇ ಬಂಧನ ನಡೆದಿದೆ. ಬಂಧನದ ಬಳಿಕ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ವಕ್ಫ್ ಮಂಡಳಿಯ ಅನುಮತಿ ಪಡೆಯದೇ ನಡೆಸಲಾದ ಕಾಮಗಾರಿಯಲ್ಲಿ ಕೋಟಿಗಳ ವಂಚನೆ ನಡೆಸಲಾಗಿದೆ ಎಂಬ ದೂರಿನ ಪ್ರಕಾರ ವಿಚಾರಣೆ ನಡೆಸಲಾಗಿದೆ. ಮೂರು ಕೋಟಿ ಖರ್ಚಾದ ಮಸೀದಿ ನಿರ್ಮಾಣ ಕಾಮಗಾರಿಗೆ ಹತ್ತು ಕೋಟಿ ಖರ್ಚು ಮಾಡಿರುವುದಾಗಿ ಲೆಕ್ಕದಲ್ಲಿ ತೋರಿಸಿರುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್‌ವಾಯ್ಸ್‌ನಲ್ಲಿ ತೋರಿಸಿರುವ ಮೊತ್ತಕ್ಕೆ ಯಾವುದೇ ಬಿಲ್‌ಗಳು ಅಥವಾ ವೋಚರ್‌ಗಳಿಲ್ಲ. ಕಟ್ಟಡಗಳನ್ನು ಬಾಡಿಗೆಗೆ ನೀಡುವಾಗಲೂ ವಂಚನೆ ನಡೆದಿದೆ ಎನ್ನಲಾಗಿದೆ. ಮಟ್ಟನ್ನೂರು ಜಮಾಅತ್ ಸಮಿತಿಯ ಸದಸ್ಯರಾಗಿರುವ ನಿಡುವೋಟುಂಕುನ್ನ್ ಎಂ.ಪಿ.ಶಮೀರ್ ಅವರು ವಕ್ಫ್ ವಂಚನೆಯ ಬಗ್ಗೆ ದೂರು ನೀಡಿದ್ದರು.

error: Content is protected !! Not allowed copy content from janadhvani.com