janadhvani

Kannada Online News Paper

ಇಹ್ಸಾನ್ ತ್ಯಾಗೋಜ್ವಲ ಸೇವೆಗೆ ಸುಲ್ತಾನುಲ್ ಉಲಮಾರ ಮಹೋನ್ನತ ಗೌರವ

ಕೆ.ಸಿ.ಎಫ್ ಮಾಡಿದ ಸಾಮಾಜಿಕ ,ಶೈಕ್ಷಣಿಕ, ಧಾರ್ಮಿಕ ಸೇವೆಯಲ್ಲಿ ಎಲ್ಲಾ ರಾಷ್ಟ್ರಗಳ ಕಟೌಟ್ ಗಳಲ್ಲಿ ಕಾಣಿಸಲ್ಪಟ್ಟ, ಶಾಶ್ವತವಾದ ಕೊಡುಗೆಯಾಗಿ ಗುರುತಿಸಲ್ಪಟ್ಟಿದ್ದು ಇಹ್ಸಾನ್ ಸೇವಾರಂಗದಲ್ಲಿ ಅವರು ನೀಡುತ್ತಿರುವ ಸಹಾಯ , ಸಹಕಾರ, ಮತ್ತು ಅವರ ಮುಂದಾಳತ್ವದ ಶೈಕ್ಷಣಿಕ ಸಮುಚ್ಚಯಗಳಾಗಿದೆ.

ಕೆ.ಸಿ.ಎಫ್ ದಶವಾರ್ಷಿಕದಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟ, ಕೆ.ಸಿ.ಎಫ್ ಸಾಮಾಜಿಕ ,ಶೈಕ್ಷಣಿಕ ಕೊಡುಗೆಯ ದಶ ವರ್ಷದಲ್ಲಿ ಗುರುತಿಸಲ್ಪಟ್ಟ ಕ್ಷೇತ್ರವಾಗಿದೆ ಇಹ್ಸಾನ್ ಕರ್ನಾಟಕದ ಕೊಡುಗೆಗಳು. ವ್ಯಕ್ತಿಗಳು ಸಂಸ್ಥೆ ಕಟ್ಟಿ ಬೆಳೆಸಬಹುದು, ಆದರೆ ಸಂಘಟನೆಯ ಮುಂದಾಳತ್ವದಲ್ಲಿ ಸಂಸ್ಥೆ ಬೆಳೆಯುವುದು ,ಬೆಳೆಸುವುದು ಸುಲಭವಲ್ಲ. ಆದರೆ ಕೆ.ಸಿ.ಎಫ್ ತೋರಿಸಿ ಕೊಟ್ಟಿತು.

60ರಷ್ಟು ದಾಇಗಳು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರೆ, ಅದರಲ್ಲಿ 10ರಷ್ಟು ದಾಇಗಳು ಕೆ.ಸಿ.ಎಫ್ ನೆರಳಲ್ಲಿ ಹತ್ತು ವರ್ಷಗಳು ಉತ್ತರ ಕರ್ನಾಟಕದ ಬಡ ಮಕ್ಕಳ ಶಿಕ್ಷಣ ,ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತ್ಯಾಗೋಜ್ವಲ ಸೇವೆಗೆ ಸಾಕ್ಷಿಯಾಗಿ ಸುಲ್ತಾನುಲ್ ಉಲಮಾರಿಂರ ಮಹೋನ್ನತ ಗೌರವ ಕೆ.ಸಿ.ಎಫ್ ವೇದಿಕೆಯಲ್ಲಿ ಸ್ವೀಕರಿಸಿದರು ಅಲ್ ಹಮ್ದುಲಿಲ್ಲಾಹ್. ಅಲ್ಲಾಹು ಸ್ವೀಕರಿಸಲಿ ಆಮೀನ್.

ಕೆ.ಸಿ.ಎಫ್ ಮಾಡಿದ ಸಾಮಾಜಿಕ ,ಶೈಕ್ಷಣಿಕ, ಧಾರ್ಮಿಕ ಸೇವೆಯಲ್ಲಿ ಎಲ್ಲಾ ರಾಷ್ಟ್ರಗಳ ಕಟೌಟ್ ಗಳಲ್ಲಿ ಕಾಣಿಸಲ್ಪಟ್ಟ, ಶಾಶ್ವತವಾದ ಕೊಡುಗೆಯಾಗಿ ಗುರುತಿಸಲ್ಪಟ್ಟಿದ್ದು ಇಹ್ಸಾನ್ ಸೇವಾರಂಗದಲ್ಲಿ ಅವರು ನೀಡುತ್ತಿರುವ ಸಹಾಯ , ಸಹಕಾರ, ಮತ್ತು ಅವರ ಮುಂದಾಳತ್ವದ ಶೈಕ್ಷಣಿಕ ಸಮುಚ್ಚಯಗಳಾಗಿದೆ. ಖಲೀಲ್ ತಂಙಳ್ ಇಹ್ಸಾನ್ ಸೇವೆಯನ್ನು ಪ್ರಶಂಸಿಸಿ, ದಾಇಗಳನ್ನು ಹುರಿದುಂಬಿಸಲು ಮರೆಯಲಿಲ್ಲ.

ಕಾರ್ಯಕ್ರಮ ಮುಗಿದು ,ಮತ್ತೆ ಕರ್ಮರಂಗಕ್ಕೆ ಇಹ್ಸಾನ್ ದಾಇಗಳು ಹೊರಟಿದ್ದಾರೆ, ಅವರಿಗೆ ಕೆ.ಸಿ.ಎಫ್ ನೀಡಿದ ನೈತಿಕ ಬೆಂಬಲ ಅವರ ಭವಿಷ್ಯದ ಉತ್ತರ ಕರ್ನಾಟಕ ಸೇವೆಯಲ್ಲಿ ಮತ್ತಷ್ಟು ಆವೇಶವನ್ನು ನೀಡುವುದರಲ್ಲಿ ಸಂಶಯವಿಲ್ಲ. ಅಲ್ಲಾಹು ತೌಫೀಕ್ ನೀಡಲಿ ಆಮೀನ್.

#Ihsan Karnataka

error: Content is protected !! Not allowed copy content from janadhvani.com