janadhvani

Kannada Online News Paper

ಹಜ್ಜ್ : ನಿಯಮ ಉಲ್ಲಂಘಕರಿಗೆ ಸಾರಿಗೆ ಸೌಲಭ್ಯ ಒದಗಿಸಿದ್ದಲ್ಲಿ 50 ಸಾವಿರ ರಿಯಾಲ್ ದಂಡ

ವಿದೇಶಿಯಾಗಿದ್ದರೆ, ದಂಡನಾತ್ಮಕ ಕ್ರಮಗಳ ನಂತರ ಅವರನ್ನು ಗಡೀಪಾರು ಮಾಡಲಾಗುವುದು ಮತ್ತು ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು

ರಿಯಾದ್: ಹಜ್ ಪರ್ಮಿಟ್ ಅಥವಾ ವೀಸಾ ಇಲ್ಲದೆ ಹಜ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ ನೀಡಿದೆ. ಹಜ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸುವವರಿಗೆ ನಿರ್ದಿಷ್ಟ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.

ಆರು ತಿಂಗಳ ಜೈಲು ಶಿಕ್ಷೆ ಮತ್ತು 50,000 ರಿಯಾಲ್‌ಗಳವರೆಗೆ ದಂಡ ವಿಧಿಸಲಾಗುತ್ತದೆ.ಅದೂ ಅಲ್ಲದೆ, ಸಾರಿಗೆ ಸಾಧನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯವನ್ನು ಕೋರಲಾಗುವುದು.ಅವರು ವಿದೇಶಿಯಾಗಿದ್ದರೆ, ದಂಡನಾತ್ಮಕ ಕ್ರಮಗಳ ನಂತರ ಅವರನ್ನು ಗಡೀಪಾರು ಮಾಡಲಾಗುವುದು ಮತ್ತು ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಹಜ್ ಉಮ್ರಾ ಸಚಿವಾಲಯವು ‘ಎಕ್ಸ್’ ಖಾತೆಯಲ್ಲಿ ಹೇಳಿದೆ.

error: Content is protected !! Not allowed copy content from janadhvani.com