janadhvani

Kannada Online News Paper

ಹಜ್ಜ್ 2024: ದೇಶೀಯ ಹಜ್ ಯಾತ್ರಿಕರಿಗೆ ಹೊಸ ಪ್ಯಾಕೇಜ್- ಶೀಘ್ರದಲ್ಲೇ ಘೋಷಣೆ

ಈ ಪ್ಯಾಕೇಜ್ ಮೂಲಕ ಬರುವವರ ವಸತಿ ಮಿನಾದಲ್ಲಿ ಹೊಸದಾಗಿ ಪೂರ್ಣಗೊಂಡ ಬಹು ಅಂತಸ್ತಿನ ಗೋಪುರಗಳಲ್ಲಿರುತ್ತದೆ.

ಮಕ್ಕಾ: ಸೌದಿ ಅರೇಬಿಯಾ ದೇಶೀಯ ಯಾತ್ರಿಕರಿಗೆ ಶೀಘ್ರದಲ್ಲೇ ಹೊಸ ಹಜ್ ಪ್ಯಾಕೇಜ್ ಅನ್ನು ಘೋಷಿಸಲಿದೆ. ಈ ಪ್ಯಾಕೇಜ್ ಮೂಲಕ ಬರುವವರ ವಸತಿ ಮಿನಾದಲ್ಲಿ ಹೊಸದಾಗಿ ಪೂರ್ಣಗೊಂಡ ಬಹು ಅಂತಸ್ತಿನ ಗೋಪುರಗಳಲ್ಲಿರುತ್ತದೆ. ಹೊಸ ಪ್ಯಾಕೇಜ್ ಘೋಷಣೆಯಿಂದ ಈ ವರ್ಷ ಹೆಚ್ಚುವರಿಯಾಗಿ 11,000 ಮಂದಿ ಸ್ಥಳೀಯರಿಗೆ ಹಜ್ ನಿರ್ವಹಿಸಲು ಸಾಧ್ಯವಾಗಲಿದೆ.

ಈ ಪ್ಯಾಕೇಜ್ ನಾಲ್ಕು ದೇಶೀಯ ಹಜ್ ಸೇವಾ ಕಂಪನಿಗಳ ಅಡಿಯಲ್ಲಿರುತ್ತದೆ. ಜಮ್ರಾದಿಂದ ಒಂದು ಕಿಲೋಮೀಟರ್ ದೂರದಲ್ಲಿ ಐದು ಮಹಡಿಗಳಲ್ಲಿ ಹೊಸ ಗೋಪುರವನ್ನು ನಿರ್ಮಿಸಲಾಗಿದೆ. ಇದು ಯಾತ್ರಾರ್ಥಿಗಳಿಗೆ ಮೂರು ಲಿಫ್ಟ್‌ಗಳನ್ನು ಮತ್ತು ಇತರ ಸೇವೆಗಳಿಗೆ ಮಾತ್ರವಾಗಿ ಒಂದು ಲಿಫ್ಟ್ ಅನ್ನು ಹೊಂದಿರುತ್ತದೆ.

ಒಂದೇ ಬಾರಿಗೆ 25 ರಿಂದ 30 ಯಾತ್ರಾರ್ಥಿಗಳು ವಾಸಿಸಲು ಸಾಧ್ಯವಾಗುವ ರೀತಿಯಲ್ಲಿ ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಮತ್ತು ಧಾರಾಳ ಸ್ನಾನಗೃಹಗಳಿವೆ.

ಮಕ್ಕಾ ನಿವಾಸಿಗಳಿಗೆ ಪ್ರತ್ಯೇಕವಾಗಿ ಒಂದು ದಿನದ ಹಜ್ ಪ್ಯಾಕೇಜ್ ಅನ್ನು ಘೋಷಿಸಲು ಸಚಿವಾಲಯ ಚಿಂತನೆ ನಡೆಸಿದೆ.

error: Content is protected !! Not allowed copy content from janadhvani.com