janadhvani

Kannada Online News Paper

ಬೆಂಗಳೂರಲ್ಲಿ ಅರಳಿದ ಮಲೆನಾಡು ಪ್ರತಿಭೆ-ಫಾಝಿಲ್ ರೆಹಮಾನ್ Weight Lifting ನಲ್ಲಿ ಪ್ರಥಮ

ಈ ವರದಿಯ ಧ್ವನಿಯನ್ನು ಆಲಿಸಿ

ಕ್ರೀಡೆಯು ವ್ಯಕ್ತಿಯನ್ನು ದೈಹಿಕವಾಗಿ ಹಾಗು ಅಷ್ಟೇ ಮಾನಸಿಕವಾಗಿ ಸದೃಢಗೊಳಿಸುವ ಕಲೆ, ಕ್ರೀಡೆ ಸಾಮಾನ್ಯವಾಗಿ ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೆ ನಿರಂತರ ಶ್ರಮ ಹಾಗು ಏಕಾಗ್ರತೆ ಹಾಗು ಗುರಿ ತಲುಪುವ ಸಾಮರ್ಥ್ಯ ಅಗತ್ಯ. ಅದರಲ್ಲೂ Weight Lifting ‘ಭಾರ ಎತ್ತುವ ಕ್ರೀಡೆ’ ಗಂತೂ ಗಟ್ಟಿ ಪೈಲ್ವಾನರೇ ಬೇಕು, ಏಕೆಂದರೆ ಅತಿಯಾದ ಭಾರ ಎತ್ತುವ ಸಾಮರ್ಥ್ಯ ಎಲ್ಲರಿಗೂ ದಕ್ಕುವಂತದ್ದಲ್ಲ. ಆದರೆ ಈ ಅಸಾಮಾನ್ಯ ಕ್ರೀಡೆಯನ್ನು ಸಾಧಿಸಿ ಮಲೆನಾಡಿನ ಕೀರ್ತಿಯನ್ನು ದೂರದ ಬೆಂಗಳೂರಲ್ಲಿ ಎತ್ತಿಹಿಡಿದಿದ್ದಾರೆ ಕೊಪ್ಪ ತಾಲ್ಲೂಕಿನ ಸಣ್ಣಕೆರೆಯ ಫಾಝಿಲ್ ರೆಹಮಾನ್ ಎಂಬ ಯುವಕ.

ಇತ್ತೀಚಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯತ್ ‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ನಗರ ಜಿಲ್ಲೆ ಹಾಗು ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು’ ಇದರ ಸಹಯೋಗದಲ್ಲಿ ನಡೆದ 2022-23 ನೇ ಸಾಲಿನ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದ Weight Lifting ನಲ್ಲಿ ಭಾಗವಹಿಸಿ ಪ್ರಥಮ ಪ್ರಶಸ್ತಿ ತಮ್ಮದಾಗಿಸಿ ಜಿಲ್ಲೆಗೆ ಹಾಗು ಕೊಪ್ಪ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಮುಂದಿನ ರಾಜ್ಯ ಮಟ್ಟದ ವಿಭಾಗವಾಗಿ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದು ಕೊಂಡಿದ್ದಾರೆ.

ಅಪಾರವಾದ ಶ್ರದ್ಧೆ ಹಾಗು ಕಠಿಣ ಪರಿಶ್ರಮದ ಮೂಲಕ ಈ ಸಾಧನೆಯನ್ನು ಮಾಡಿದ ಫಾಝಿಲ್ ರೆಹಮಾನ್ ಭಾರತದ ಭವಿಷ್ಯದ ಆಟಗಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

🖊️…. ಉಮರ್ ಫಾರೂಕ್ ಕೊಪ್ಪ

error: Content is protected !! Not allowed copy content from janadhvani.com