janadhvani

Kannada Online News Paper

ಸ್ಕಾರ್ಫ್ ವಿವಾದ ಇತ್ಯರ್ಥಕ್ಕಾಗಿ ಎಸ್ಸೆಸ್ಸೆಫ್ ನಿಂದ ಕಾನೂನಾತ್ಮಕ ಹೋರಾಟ- ಸುನ್ನೀ ಸಂಘಟನೆಗಳ ಬೆಂಬಲ

ಉಡುಪಿ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಸ್ಕಾರ್ಫ್ ವಿವಾದದ ಬಗ್ಗೆ ಹಲವು ಹೋರಾಟಗಳನ್ನು ನಮ್ಮ ಸಂಘಟನೆಗಳು ನಡೆಸುತ್ತಿದ್ದು ಇನ್ನಷ್ಟು ಹೋರಾಟಗಳನ್ನು ಸಕ್ರಿಯ ಗೊಳಿಸುವ ನಿಟ್ಟಿನಲ್ಲಿ ಸುನ್ನೀ ಸಂಘಟನೆಗಳ ನಾಯಕರ ಸಭೆಯು ಅಜ್ಜರಕಾಡು ಸುನ್ನೀ ಕಛೇರಿಯಲ್ಲಿ ನಡೆಯಿತು.

ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳ ಧಾರ್ಮಿಕ, ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿ ಅವರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿಯುತ ಮತ್ತು ಸೌಹಾರ್ದಮಯ ರೀತಿಯಲ್ಲಿ ಕಾನೂನುಬದ್ಧವಾಗಿ ವಿವಾದವನ್ನು ಇತ್ಯರ್ಥ ಪಡಿಸುವ ಪೂರ್ಣ ಪ್ರಯತ್ನವನ್ನು ನಡೆಸುವುದು ಹಾಗೂ ಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಕಾನೂನಾತ್ಮಕವಾಗಿ ನಡೆಸುವ ಎಲ್ಲಾ ಹೋರಾಟಗಳಿಗೂ ಬೆಂಬಲ ನೀಡುವುದಾಗಿ ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟ ಕರೆ ನೀಡಲಾಯಿತು.

ಜಿಲ್ಲಾ ಸಹಾಯಕ ಖಾಝಿ ಅಲ್ಹಾಜ್ ಬಿ ಕೆ ಅಬ್ದುರ್ರಹ್ಮಾನ್ ಮದನಿ ಸಭೆಯನ್ನು ಉದ್ಘಾಟಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಅಡ್ವಕೆಟ್ ಹಂಝತ್ ಹೆಜಮಾಡಿ, ಎಸ್ ಎಮ್ ಎ ಜಿಲ್ಲಾಧ್ಯಕ್ಷ ಮುಹಮ್ಮದ್ ಮನ್ಸೂರ್ ಕೋಡಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ ಉಚ್ಚಿಲ, ಎಸ್ ಡಿ ಐ ಜಿಲ್ಲಾ ನಾಯಕ ಸುಬ್ಹಾನ್ ಅಹ್ಮದ್ ಹೊನ್ನಾಳ, ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ ಮೂಳೂರು, ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಅಶ್ರಫ್ ಅಂಜದಿ ಹಾಗೂ ಅಬ್ದುರ್ರವೂಫ್ ಖಾನ್ ಕುಂದಾಪುರ ಸಾಂದರ್ಭಿಕವಾಗಿ ಮಾತನಾಡಿದರು.
ಸಂಯುಕ್ತ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು, ಸುನ್ನೀ ಸಂಘಟನೆಗಳ ಜಿಲ್ಲಾ ನಾಯಕರಾದ ಹಾಜಿ ಕೆ ಮೊಯ್ದಿನ್ ಗುಡ್ವಿಲ್, ಹಾಜಿ ಕೆ ಪಿ ಇಬ್ರಾಹಿಂ ಮಟಪಾಡಿ,ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಅಶ್ರಫ್ ಹೂಡೆ, ಅಬ್ದುಲ್ಲಾ ಸೂಪರ್ ಸ್ಟಾರ್, ಆರ್ ಕೆ ಫಾರೂಖ್ ರಂಗಿನಕೆರೆ, ಅಬ್ದುಲ್ ಖಯ್ಯೂಂ, ಜುನೈದ್ ಹೂಡೆ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಸುನ್ನೀ ಸಂಘಟನೆಗಳ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು, ಮುಸ್ಲಿಂ ಜಮಾಅತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ ವಂದಿಸಿದರು.

error: Content is protected !! Not allowed copy content from janadhvani.com