janadhvani

Kannada Online News Paper

ಎಸ್ಸೆಸ್ಸೆಫ್ ಕಲ್ಲುಗುಂಡಿ ಯೂನಿಟ್: ನೂತನ ಸಾರಥಿಗಳು

ಎಸ್ಸೆಸ್ಸೆಫ್ ಕಲ್ಲುಗುಂಡಿ ಯೂನಿಟ್ ಕೌನ್ಸಿಲ್ ದಿನಾಂಕ 23-01-2022 ಆದಿತ್ಯವಾರ ಸಂಜೆ 7 ಗಂಟೆಗೆ ಕಲ್ಲುಗುಂಡಿಯಲ್ಲಿ ನಡೆಯಿತು. SჄS ಸುಳ್ಯ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಜೌಹರಿ ಮೇನಾಲ ಉದ್ಘಾಟಿಸಿದರು.

ಅಬ್ದುಲ್ ಹಮೀದ್ ಸುಣ್ಣಮೂಲೆ ತರಗತಿ ಮಂಡಿಸಿದರು. ನಂತರ ನೂತನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಂಶಾದ್ ಚಟ್ಟೆಕಲ್ಲು, ಪ್ರಧಾನ ಕಾರ್ಯದರ್ಶಿ ಸಲೀಕ್ ಚಟ್ಟೆಕಲ್ಲು, ಕೋಶಾಧಿಕಾರಿ ಜುಹೈಲ್ ಕೊಯನಾಡು, ಕ್ಯಾಂಪಸ್ ಕಾರ್ಯದರ್ಶಿ ರುನೈಝ್ ಕೊಯನಾಡು, ವಿಸ್ಡಂ ಕಾರ್ಯದರ್ಶಿ ಜುನೈದ್ ಸಿ.ಎ, ಕ್ವಾಲಿಟಿ ಡೆವಲಪ್ಮೆಂಟ್ ಕಾರ್ಯದರ್ಶಿ ಅಲಿ ಚಟ್ಟೆಕಲ್ಲು, ಪಬ್ಲಿಕೇಶನ್ ಕಾರ್ಯದರ್ಶಿ ಹಸೈನ್ ಸಿ.ಎ, ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ಫಾರಿಝ್ ಕೊಯನಾಡು, ರೈಂಬೋ ಕಾರ್ಯದರ್ಶಿ ಹುಸೈನ್ ಮಿಸ್ಬಾಹಿ, ದಅವಾ ಕಾರ್ಯದರ್ಶಿ ಜವಾದ್ ಸಂಪಾಜೆ, ಮೀಡಿಯಾ ಕಾರ್ಯದರ್ಶಿ ಬಾಸಿತ್ ರವರನ್ನೂ ಸಮಿತಿ ಸದಸ್ಯರಾಗಿ ಆಶಿಕ್ ದಂಡಕಜೆ, ನಜಾತ್ ಕೋಟ್ರಸ್, ಅಝೀಝ್ ಸಂಪಾಜೆ, ನವಾಝ್ ಚಟ್ಟೆಕಲ್ಲು ರವರನ್ನೂ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಖ್ ಬಿ.ಎ ಹಾಗೂ ರಶೀದ್ ಝೈನಿ ಯವರು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ SSF ಹಾಗೂ SჄS ನ ಹಲವು ಕಾರ್ಯಕರ್ತರು ಹಾಗೂ ನಾಯಕರು ಉಪಸ್ಥಿತರಿದ್ದರು. ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ ಎ.ಎಂ.ಫೈಝಲ್ ಝುಹ್‌ರಿ ಧನ್ಯವಾದ ಸಮರ್ಪಿಸಿದರು. ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.

error: Content is protected !! Not allowed copy content from janadhvani.com