janadhvani

Kannada Online News Paper

ಗಲ್ಫ್ ಯುನೈಟೆಡ್ ಅಧ್ಯಕ್ಷರಾಗಿ ಇರ್ಷಾದ್. BK ಆಯ್ಕೆ

GULF UNITED 9TH BLOCK, KATIPALLA ಇದರ 5 ನೇ ವಾರ್ಷಿಕ ಮಹಾಸಭೆಯು ದಿನಾಂಕ 20-01-2022 ರಂದು ಜುಬೈಲ್ Al Faisaliya Garden ನಲ್ಲಿ Gulf ಮುಲಾಕಾತ್ ಎಂಬ ಕಾರ್ಯಕ್ರಮದೊಂದಿಗೆ ಬಹಳ ಅಚ್ಚುಕಟ್ಟಾಗಿ ಸದಸ್ಯರ ಸಮ್ಮುಖದಲ್ಲಿ ಸಲೀಂ ರವರ ಸಭಾ ಅಧ್ಯಕ್ಷ ಸ್ಥಾನದಲ್ಲಿ ನೆಡೆಯಿತು.
ಸಾದಿಕ್ NGC ರವರು ಕಿರಾತ್ ಪಾರಾಯಣ ಹಾಗು ಶುಕೂರ್ ಕಲಾಯಿ ರವರ ದುವಾದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಪ್ರಧಾನ ಕಾರ್ಯದರ್ಶಿ ನಾಸೀರ್ KS ರವರು ಅತಿಥಿ ಗಳನ್ನು ಸ್ವಾಗತಿಸಿ 2020-2021 ರ ವರದಿ ಹಾಗು ಲೆಕ್ಕ ಪತ್ರ ಮಂಡಿಸಿದರು. ಇದನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಸಿಫ್ ರವರು ಪ್ರೇರಣಾ ಭಾಷಣ ಮಾಡಿದರು.
ಜಾವೇದ್ ದುಬೈ ಹಾಗು ನಾಸೀರ್ KS ರವರಿಗೆ ಉತ್ತಮ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.2022 -23 ವರ್ಷದ ಅಂದಾಜು ಬಜೆಟ್ ಅನ್ನು ಶಂಶೀರವರು ಮಂಡಿಸಿದರು.ಸಲೀಂ ರವರ ಅಧ್ಯಕ್ಷತೆಯಲ್ಲಿ ಹೊಸ ಕಮಿಟಿಯನ್ನು ರಚಿಸಲಾಯಿತು.15 ಸದಸ್ಯರನ್ನೊಳಗೊಂಡ ಹೊಸ ಸಮಿತಿಯುನ್ನು ಈ ಕೆಳಗಿನಂತೆ ಸಭೆಯ ಸರ್ವಾನುಮತದ ಅನುಮೋದನೆಯೊಂದಿಗೆ ರಚಿಸಲಾಯಿತು .
ಗೌರವಾಧ್ಯಕ್ಷರು – ಆಸೀಫ್( ಬಾವ ),
ಅಧ್ಯಕ್ಷರು – ಇರ್ಷಾದ್. BK,
ಉಪಾಧ್ಯಕ್ಷರು – ಫಾರೂಕ್ ಜುಬೈಲ್, ಪ್ರಧಾನ ಕಾರ್ಯದರ್ಶಿ – ಸಂಶೀರ್,
ಜೊತೆ ಕಾರ್ಯದರ್ಶಿ – ಫಿರೋಜ್,
ಕೋಶಾಧಿಕಾರಿ – ಫಾರೂಕ್ ಖೋಬರ್,
ದುಬೈ ಉಸ್ತುವಾರಿ – ಜಾವೇದ್ ,
ಸಲೆಹೆಗಾರ – ನಾಸೀರ್ KS,
ಊರಿನ ಉಸ್ತುವಾರಿ – ರಿಝ್ವಾನ್ BK
ಕಾರ್ಯಕಾರಿ ಸಮಿತಿ ಸದಸ್ಯರು :
ಸಲೀಂ ಖೋಬರ್ ,ಅಫೀಜ್ KC, ಆಸೀಫ್ ದಮ್ಮಾಮ್ ,ಸಾದಿಕ್ NGC,ನಝರುದ್ದೀನ್, ರಹೀಮ್ ದುಬೈಕಾರ್ಯಕ್ರಮದ ಕೊನೆಯಲ್ಲಿ ಹೊಸ ಕಾರ್ಯದರ್ಶಿ ಶಂಶೀರ್ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com