janadhvani

Kannada Online News Paper

ನಾಳೆ ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿಯಿಂದ ಡ್ರಗ್ಸ್ ವಿರುದ್ಧ ಜಾಗೃತಿ ಜನಾಂದೋಲನ

ಮಡಿಕೇರಿ :-ಜೂನ್-26 ವಿಶ್ವ ಡ್ರಗ್ಸ್ ವಿರೋಧಿ ದಿನವಾಗಿದ್ದು ಇದರ ಅಂಗವಾಗಿ ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿಯಿಂದ ಮಾದಕ ಪದಾರ್ಥಗಳ ವಿರುದ್ಧ ವಿವಿಧ ರೀತಿಯ ಜಾಗೃತಿ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ರವರು ತಿಳಿಸಿದ್ದಾರೆ.

ಈ ಹಿಂದೆಯೂ ಸಂಘಟನೆ ಮಾದಕ ಪದಾರ್ಥಗಳ ವಿರುದ್ಧ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದ್ದು ಆದರೆ ಈಗ ಲಾಕ್‌ಡೌನ್ ಇರುವುದರಿಂದ ಸಾರ್ವಜನಿಕವಾಗಿ ಯಾವುದನ್ನು ನಡೆಸಲು ಸಾಧ್ಯವಾಗದಿದ್ದರೂ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿ ಗರಿಷ್ಠ ಮಟ್ಟದಲ್ಲಿ ಇವುಗಳ ವಿರುದ್ಧದ ಸಂದೇಶಗಳನ್ನು ಜನತೆಗೆ ತಲುಪಿಸುವ ಶ್ರಮ ವಹಿಸುತ್ತಿದೆ, ಈಗಾಗಲೇ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ಡಿವಿಷನ್ ಮಟ್ಟದಲ್ಲಿ ಸಪ್ತ ದಿನಗಳ ಲೇಖನ,ಕವಿತೆ, ಕವನ ಸ್ಟೇಟಸ್ ಮುಂತಾದ ವಿವಿಧ ಆಕರ್ಷಣೀಯ ಸಪ್ತಾಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಜೂನ್ 26 ರಂದು ಬೆಳಗ್ಗೆ 10 ಕ್ಕೆ ಜಿಲ್ಲಾ ಮಟ್ಟದಲ್ಲೂ ಜಿಲ್ಲಾ ಸಮಿತಿಯ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಜಾಗೃತಿ ಆಂದೋಲನ ನಡೆಯಲಿದ್ದು ಕರ್ನಾಟಕ ರಾಜ್ಯ ಎಸ್‌ವೈ‌ಎಸ್‌ನ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಅಬ್ದುಲ್ ರಶೀದ್ ಝೈನಿ ಅಲ್‌ಕಾಮಿಲ್ ಕಕ್ಕಿಂಜೆ,ರಾಜ್ಯ ವಕ್ಫ್ ಸಮಿತಿ ಸದಸ್ಯರಾದ ಶಾಫಿ ಸಅದಿ ಬೆಂಗಳೂರು, ಶಕ್ತಿ ದಿನ ಪತ್ರಿಕೆಯ ಸಂಪಾದಕರಾದ ಜಿ‌.ಚಿದ್ವಿಲಾಸ್, ಸಾಮಾಜಿಕ ಹೋರಾಟಗಾರ‌ರಾದ ವಿ ಪಿ ಶಶಿಧರ್,ಕೆಎಂಜೆ ಇದರ ಕೊಡಗು ಜಿಲ್ಲಾ ಸಮಿತಿ ಸಲಹೆಗಾರರಾದ ಅಡ್ವಕೇಟ್ ಕುಞ್ಞಿ ಅಬ್ದುಲ್ಲ, ಸೋ.ಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಶಿವ ಪ್ರಸಾದ್, ಹಿರಿಯ ವರದಿಗಾರ ಹಾಗೂ ಪ್ರಸ್‌ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ,ಯಸಳೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮುಂತಾದ ಧಾರ್ಮಿಕ ಸಾಮಾಜಿಕ ಮುಖಂಡರ ಸಂದೇಶ ಭಾಷಣಗಳು ನೇರಪ್ರಸಾರವಾಗಲಿದೆ. ಬಯಸುವವರು SSF KODAGU ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದಾಗಿದೆ.

ಅದೇ ರೀತಿ ಶಾಖಾ ಮಟ್ಟದಲ್ಲೂ ಡ್ರಗ್ಸ್ ವಿರುದ್ಧ ಸಂದೇಶವಿರುವ ಬಿತ್ತಿ ಪತ್ರಗಳನ್ನು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಅಂಟಿಸುವುದು ಮತ್ತು ಕಾರ್ಯಕರ್ತರು ಪೋಸ್ಟರ್ ಪ್ರದರ್ಶನ ಮಾಡುವ ಕಾರ್ಮಕ್ರಮಗಳೂ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com