janadhvani

Kannada Online News Paper

ದುಬೈ ಪ್ರವೇಶಾನುಮತಿ: ಮುಂದುವರಿದ ಅನಿಶ್ಚಿತತೆ- ಟಿಕೆಟ್ ಬುಕಿಂಗ್ ಸ್ಥಗಿತ

ದುಬೈ,ಜೂ.20: ದುಬೈ ಪ್ರವೇಶಾನುಮತಿಯ ನಿಯಮಗಳಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಭಾರತೀಯ ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕಿಂಗ್ ಸ್ಥಗಿತಗೊಳಿಸಿದ.

ರಾಪಿಡ್ ಟೆಸ್ಟ್ ಮತ್ತು ಇತರ ಸಮಸ್ಯೆಗಳಲ್ಲಿನ ಅನಿಶ್ಚಿತತೆಯಿಂದಾಗಿ ಬುಕಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ನಿರ್ಗಮನಕ್ಕೆ ನಾಲ್ಕು ಗಂಟೆಗಳ ಮುಂಚಿತವಾಗಿ ಕೋವಿಡ್ ರಾಪಿಡ್ ಟೆಸ್ಟ್ ರಿಪೋರ್ಟನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಅದನ್ನು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯಗತಗೊಳಿಸುವ ಪ್ರಾಯೋಗಿಕ ಅಡಚಣೆಗಳು ವಿಮಾನಯಾನ ಸಂಸ್ಥೆಗಳಿಗೆ ತಡೆಯಾಗಿದೆ.

ಇದಲ್ಲದೆ, ಅಬುಧಾಬಿ ಮತ್ತು ಶಾರ್ಜಾ ವೀಸಾ ಹೊಂದಿರುವವರು ದುಬೈಗೆ ಪ್ರಯಾಣಿಸಲು ಅವಕಾಶವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ, 18 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಕಡ್ಡಾಯವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಭಾರತೀಯ ವಿಮಾನಯಾನ ಸಂಸ್ಥೆಯಾದ ಇಂಡಿಗೊ ಬುಕಿಂಗ್ ಪ್ರಾರಂಭಿಸಿತ್ತು. ಟಿಕೆಟ್‌ಗಳು 900 ದಿರ್ಹಮ್‌ಗಳಿಂದ ಪ್ರಾರಂಭವಾಗಿ 1800 ದಿರ್ಹಾಮ್‌ಗಳ ವರೆಗೆ ಏರಿಕೆ ಕಂಡಿತ್ತು. ಆ ಸಮಯದಲ್ಲೇ ಬುಕಿಂಗ್ ತಕ್ಷಣವೇ ನಿಲ್ಲಿಸಲಾಗುವುದು ಎಂಬ ಪ್ರಕಟಣೆ ಬಂದಿದೆ. ಇತರ ವಿಮಾನಯಾನ ಸಂಸ್ಥೆಗಳಿಗೂ ಇದೇ ರೀತಿಯ ಅನಿಶ್ಚಿತತೆಗಳು ಅಸ್ತಿತ್ವದಲ್ಲಿವೆ. ದುಬೈಗೆ ಪ್ರವೇಶಾನುಮತಿ ಬುಧವಾರದಿಂದ ಜಾರಿಯಾಗಲಿದೆ.

error: Content is protected !! Not allowed copy content from janadhvani.com