janadhvani

Kannada Online News Paper

ತ್ವೈಬಾ ಸೆಂಟರ್ ಈಶ್ವರಮಂಗಳ ವತಿಯಿಂದ ಲೋಕಾರ್ಪಣೆಗೊಂಡ ಆಂಬುಲನ್ಸ್ ಸೇವೆ

ಈಶ್ವರಮಂಗಳ ತ್ವೈಬಾ ಸೆಂಟರ್ ವತಿಯಿಂದ ಸುನ್ನಿ ಸ್ಟುಡೆಂಟ್ ಫೆಡರೇಶನ್ (SSF), ಸುನ್ನಿ ಯುವಜನ ಸಂಘ (SYS), ಕರ್ನಾಟಕ ಮುಸ್ಲಿಂ ಜಮಾಅತ್ (KMJ) ಹಾಗೂ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಸಹಯೋಗದೊಂದಿಗೆ ಸೇವೆಯನ್ನು ಮಾಡಲಿರುವ ಆಂಬುಲನ್ಸ್ ಇಂದು ಲೋಕಾರ್ಪಣೆಗೊಂಡಿದೆ.

ತ್ವೈಬಾ ಸೆಂಟರ್ ಸಾರಥಿ ಹಾಗೂ ಹಲವು ಸುನ್ನಿ ಸಂಘಟನೆಗಳ ನೇತೃತ್ವ ಸ್ಥಾನದಲ್ಲಿರುವ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ಕಣ್ಣವಂ ತಂಙಳ್ ರವರು ಆಂಬುಲನ್ಸ್ ಲೋಕಾರ್ಪಣೆ ಮಾಡಿ ದುಆಶಿರ್ವಚನ ಮಾಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ರೈ ಶಾಂತ್ಯರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಪಂಚಾಯತ್ ಸದಸ್ಯೆಯರಾದ ಅನಿತಾ ಹೇಮನಾಥ್ ಶೆಟ್ಟಿಯವರು ಉದ್ಘಾಟನೆ ಮಾಡಿದರು.

ಈಶ್ವರಮಂಗಳ ಪರಿಸರದಲ್ಲಿ ತ್ವೈಬಾ ಸೆಂಟರ್ ಕೇಂದ್ರೀಕೃತವಾಗಿ SSF, SYS & KMJ ಮಾಡುತ್ತಿರುವ ಹಲವಾರು ಸಾಮಾಜಿಕ ಸೇವೆಗಳು ನನ್ನ ಗಮನಕ್ಕೆ ಬಂದಿದೆ ಹಾಗೂ ಅದು ಅಭಿನಂದನಾರ್ಹ ಕಾರ್ಯವಾಗಿದೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತಿದ್ದೇನೆ ಎಂದೂ ಉದ್ಘಾಟನಾ ಭಾಷಣದಲ್ಲಿ ಅನಿತಾ ಹೇಮನಾಥ್ ಶೆಟ್ಟಿಯವರು ಹೇಳಿದರು.

ಈಶ್ವರ ಮಂಗಳದಲ್ಲಿ SSF & SYS ನಡೆಸುವ ಸೇವೆಗಳನ್ನು ನಾನು ಕಣ್ಣಾರೆ ನೋಡಿದವನಾಗಿದ್ದೇನೆ. ಹಲವಾರು ಸಾಮಾಜಿಕ ಸೇವೆಗಳನ್ನು ಮಾಡುವುದರಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಪಂಚಾಯತ್ ಸದಸ್ಯರಾದ ಶ್ರೀರಾಮ್ ಪಕ್ಲಾರವರು ಹೇಳಿದರು. ಪಂಚಾಯತ್ ಉಪಾಧ್ಯಕ್ಷರಾದ ಫೌಸಿಯಾ ಇಬ್ರಾಹಿಮ್ ಆಶಂಸಾ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ತ್ವೈಬಾ ಸೆಂಟರ್ ಅಧ್ಯಕ್ಷರಾದ ಹಂಝಾ ಮುಸ್ಲಿಯಾರ್, KMJ ಈಶ್ವರಮಂಗಳ ಅಧ್ಯಕ್ಷರಾದ ಅಬೂಬಕ್ಕರ್ ಕರ್ನೂರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ, SYS ಈಶ್ವರಮಂಗಳ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಯ್ಲಾ, SSF ಈಶ್ವರಮಂಗಳ ಸೆಕ್ಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ, ಶಂಸುದ್ದೀನ್ ಬಿಸಿ, ಅಬ್ದುರ್ರಹ್ಮಾನ್ ಮೇನಾಲ, ಖಾದರ್ ಕರ್ನೂರ್, ಪಿ ಎಂ‌ ಖಾದರ್ ಹಾಜಿ, ಅಬ್ದುಲ್ಲಾಹ್ ಕುಂಜ್ಞಿ ಮೆನಸಿನಕಾನ ಹಾಗೂ ಇನ್ನಿತರ ನೇತಾರರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.

ಸಿ ಕೆ ಅಹ್ಮದ್ ನಈಮಿಯವರು ಸ್ವಾಗತಿಸಿದ ಕಾರ್ಯಕ್ರಮವನ್ನು ಅಬ್ದುಲ್ ಅಝೀಝ್ ಮಿಸ್ಬಾಹಿಯವರು ವಂದಿಸಿದರು

error: Content is protected !! Not allowed copy content from janadhvani.com