janadhvani

Kannada Online News Paper

ದ.ಕ.ಕಾಂಗ್ರೆಸ್ ನಿಂದ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಪ್ರತಿಭಟನೆ

ಮಂಗಳೂರು. ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಜನಾಕ್ರೋಶ ಪ್ರತಿಭಟನೆ ಹಾಗೂ ರ್ಯಾಲಿ ನಡೆಸಲಾಯಿತು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರದ ದುರಾಡಳಿತ, ಬೆಲೆಯೇರಿಕೆ, ಖಾಸಗೀಕರಣ, ಉದ್ಯೋಗ ನಷ್ಟ ಇತ್ಯಾದಿ ಪ್ರಮುಖ ವಿಷಯಗಳ ಬಗ್ಗೆ ಜನ ನಾಯಕರ ಮತ್ತು ಸದಸ್ಯರ ಭಾಗವಹಿಸುವಿಕೆಯಲ್ಲಿ ನಗರದ ಮಧ್ಯ ಭಾಗದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ಮತ್ತು ಜಿಲ್ಲಾಧಿಕಾರಿ ಕಚೇರಿಯ ಹತ್ತಿರ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ನಂತರ ಕೇಂದ್ರದ ಬೆಲೆಯೇರಿಕೆ, ಗ್ಯಾಸ್, ಪೆಟ್ರೋಲ್, ದಿನಸಿ, ಅಡುಗೆ ಎಣ್ಣೆ, ಧಾನ್ಯ ಇತ್ಯಾದಿಗಳ ಬೆಲೆ ಏರಿಕೆ ,ರೈತರ ಕಡೆಗಣನೆ, ಖಾಸಗೀಕರಣ ಗಳ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತನಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆ ಯಲ್ಲಿ ಶ್ರೀ ಬೀ. ರಮಾನಾಥ ರೈ,ಮಂಗಳೂರು ಶಾಸಕ ಯು. ಟಿ.ಖಾದರ್, ಮೊಯಿದಿನ್ ಬಾವ,ಸಾಹುಲ್ ಹಮೀದ್,ಶಶಿಧರ ಹೆಗ್ಡೆ, ಹರೀಶ್ ಕುಮಾರ್,ಐವನ್ ಡಿ ಸೋಜ, ಮಿಥುನ್ ರೈ,ಇಬ್ರಾಹಿಂ ಕೋಡಿಜಾಲ್,ಅಬ್ದುಲ್ ರವೂಫ್ ಬಾಜಾಲ್, ಅಯ್ಯೂಬ್ ಮಂಚಿಳ, ಲತೀಫ್ ಕಂದಕ, ಸುಹೈಲ್ ಕಂದಕ,ಸದಾಶಿವ ಉಳ್ಳಾಲ್,ಸಂತೋಷ್ ಕುಮಾರ್ ರೈ,ಎಂ.ಎಸ್ ಮೊಹಮ್ಮದ್,ಮುಸ್ತಫಾ ಉಳ್ಳಾಲ್ ಯೂಸುಫ್ ಉಚ್ಚಿಲ್, ಅಬ್ದುಲ್ ಜಲೀಲ್ ಕೃಷ್ಣಾಪುರ, ಪ್ರತಿಭಾ ಕುಳಾಯಿ ,ಶಂಶುದೀನ್ ಕುದ್ರೋಳಿ ಮತ್ತಿತರರು ಉಪಸ್ಥತರಿದ್ದರು.

error: Content is protected !! Not allowed copy content from janadhvani.com