ಬೆಂಗಳೂರು: ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿರುವ ಎಸ್ಎಸ್ಎಫ್ (SSF) ಸಾಹಿತ್ಯೋತ್ಸವದ 14ನೇ ಆವೃತ್ತಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ‘ರಾಜ್ಯ ಸಾಹಿತ್ಯೋತ್ಸವ ನಿರ್ವಹಣಾ ಸಮಿತಿ’ ಯನ್ನು ರಚಿಸಲಾಗಿದೆ. ಕಳೆದ 13 ಆವೃತ್ತಿಗಳ ಯಶಸ್ಸಿನ ಹಾದಿಯಲ್ಲಿ ಸಾಗಿಬಂದಿರುವ ಈ ಕಲಾ ಹಬ್ಬವು ಈ ಬಾರಿ ಜೂನ್ನಿಂದ ಸೆಪ್ಟೆಂಬರ್ವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ.
ಇತ್ತೀಚೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಅಲ್-ಹಿಕಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಹಿತ್ಯೋತ್ಸವದ ವಿವಿಧ ಹಂತಗಳು:
ಈ ಬಾರಿಯ ಸಾಹಿತ್ಯೋತ್ಸವವು ಕೆಳಕಂಡ ವೇಳಾಪಟ್ಟಿಯಂತೆ ಜರುಗಲಿದೆ:
- ಜೂನ್ 01 – ಜೂನ್ 10: ಫ್ಯಾಮಿಲಿ ಸಾಹಿತ್ಯೋತ್ಸವ
- ಜೂನ್ 11 – ಜೂನ್ 19: ಯುನಿಟ್ ಸಾಹಿತ್ಯೋತ್ಸವ
- ಜೂನ್ 20 – ಜುಲೈ 05: ಸೆಕ್ಟರ್ ಸಾಹಿತ್ಯೋತ್ಸವ
- ಜುಲೈ 06 – ಜುಲೈ 26: ಡಿವಿಷನ್ ಸಾಹಿತ್ಯೋತ್ಸವ
- ಜುಲೈ 27 – ಆಗಸ್ಟ್ 16: ಜಿಲ್ಲಾ ಸಾಹಿತ್ಯೋತ್ಸವ
- ಸೆಪ್ಟೆಂಬರ್ 05 ಮತ್ತು 06: ರಾಜ್ಯ ಮಟ್ಟದ ಮಹಾ ಸಾಹಿತ್ಯೋತ್ಸವ (ವಿಜಯನಗರ ಜಿಲ್ಲೆಯಲ್ಲಿ)
ರಾಜ್ಯ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು:
ನೂತನ ಸಮಿತಿಗೆ ಈ ಕೆಳಗಿನವರನ್ನು ಆಯ್ಕೆ ಮಾಡಲಾಗಿದೆ:
ಚೇರ್ಮನ್ | ಕೆ.ಕೆ. ಅಶ್ರಫ್ ಹಿಮಮಿ ಸಖಾಫಿ ದಾವಣಗೆರೆ
ಜನರಲ್ ಕನ್ವೀನರ್| ಉಬೈದುಲ್ಲಾ ಆರ್.ಜಿ.ನಗರ
ಫೈನಾನ್ಸ್ ಕಾರ್ಯದರ್ಶಿ| ಸಿನಾನ್ ಸಖಾಫಿ ಹಿಕಮಿ ವಿಜಯನಗರ
ಸಮಿತಿಯ ಸದಸ್ಯರು:
MSM ಜುನೈದ್ ಹಿಮಮಿ ಸಖಾಫಿ (ಚಿತ್ರದುರ್ಗ), ಶಿಹಾಬ್ ಮಡಿವಾಳ (ಬೆಂಗಳೂರು), ಎಂ.ಕೆ. ಇಬ್ರಾಹಿಂ ಮಜೂರು (ಉಡುಪಿ), ಅಕ್ತರ್ ಹುಸೇನ್ (ಬೆಂಗಳೂರು), ಸಾಲಿಮ್ ಮುಈನಿ ಸಖಾಫಿ ರಬ್ಬಾನಿ (ಗದಗ), ಅಲ್ತಾಫ್ ಮುಈನಿ ಹಂಡುಗುಳಿ (ಚಿಕ್ಕಮಗಳೂರು), ಹಮೀದ್ ತಲಪಾಡಿ (ದ.ಕ ವೆಸ್ಟ್), ರಶೀದ್ ಮಡಂತ್ಯಾರು (ದ.ಕ ಈಸ್ಟ್), ರಶೀದ್ ಸಅದಿ ಕಾಟಿಪಳ್ಳ, ಸಿದ್ದೀಕ್ ಬಜ್ಪೆ ಹಾಗೂ ಜಂಶಾದ್ (ದ.ಕ ಈಸ್ಟ್).
ಕಾರ್ಯಕ್ರಮದ ಆರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಸ್ವಾಗತಿಸಿದರು. ಸಭೆಯಲ್ಲಿ ಸಿ.ಸಿ. ಕಾರ್ಯದರ್ಶಿ ಶಿಹಾಬ್ ಮಡಿವಾಳ ಉಪಸ್ಥಿತರಿದ್ದರು. ನೂತನ ಕನ್ವೀನರ್ ಉಬೈದುಲ್ಲಾ ಆರ್.ಜಿ. ನಗರ ವಂದನಾರ್ಪಣೆ ಮಾಡಿದರು ಎಂದು ರಾಜ್ಯ ಮೀಡಿಯಾ ವಿಭಾಗದ ಪ್ರಕಟಣೆ ತಿಳಿಸಿದೆ.
ಈ ಬಾರಿಯ ರಾಜ್ಯ ಮಟ್ಟದ ಸಾಹಿತ್ಯೋತ್ಸವವು ಉತ್ತರ ಕರ್ನಾಟಕದ ಐತಿಹಾಸಿಕ ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವುದು ವಿಶೇಷವಾಗಿದೆ.

















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ