ರಿಯಾದ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಡಿಕೆಎಸ್‌ಸಿ ರಿಯಾದ್ ವಲಯದ 30ನೇ ವಾರ್ಷಿಕ ಮಹಾಸಭೆ ಮೇ 1, 2026 ರಂದು ರಿಯಾದ್‌ನಲ್ಲಿ ನಡೆಯಿತು. ಕಾರ್ಯಕ್ರಮವು ವಲಯ ಅಧ್ಯಕ್ಷ ಅಬ್ದುಲ್ ಅಝೀಝ್ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಅಬ್ದುರ್ರಝ್ಝಾಖ್ ಹಮ್ದಾನಿ ಮಾಚಾರ್ ಅವರು ದುಆ ನೆರವೇರಿಸಿದರು.
ಡಿಕೆಎಸ್‌ಸಿ ಕೇಂದ್ರ ಸಮಿತಿ ಮೀಡಿಯಾ ವಿಂಗ್ ಮುಖ್ಯಸ್ಥ ಇಸ್ಮಾಯೀಲ್ ಕಾಟಿಪಳ್ಳ ಅವರು ಪವಿತ್ರ ಖುರ್‌ಆನ್‌ನ ಸೂರತ್ ಆಲ ಇಮ್ರಾನ್ ಪಾರಾಯಣ ಮಾಡಿದರು.ರಿಯಾದ್ ಝೋನ್ ಸಂವಹನಾ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಉಚ್ಚಿಲ ಅವರು ಬುರೈದ, ಅಲ್ ಖರ್ಜ್, ಬತ್ತಾ, ಶಿಫಾ, ದಲ್ಲಾ, ಮಲಾಝ್, ಸನಯ್ಯ ಹಾಗೂ ಯೂತ್ ವಿಂಗ್ ಘಟಕಗಳಿಂದ ಆಗಮಿಸಿದ ಸದಸ್ಯರನ್ನು ಸ್ವಾಗತಿಸಿದರು.ಡಿಕೆಎಸ್‌ಸಿ ರಿಯಾದ್ ಝೋನ್ ಆರ್ಗನೈಸರ್ ಉಸ್ತಾದ್ ಆಸಿಫ್ ಅಶ್ರಫಿ ಅವರು ಸಭೆಯನ್ನು ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಹುಝೈಫ ಪೆರಾಜೆ ಅವರು ವಾರ್ಷಿಕ ವರದಿ ಮಂಡಿಸಿದರೆ, ಹಣಕಾಸು ಕಾರ್ಯದರ್ಶಿ ಇಸ್ಮಾಯೀಲ್ ಕಣ್ಣಂಗಾರ್ ಅವರು ಹಣಕಾಸು ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು.ಸ್ಥಾಪಕ ಸದಸ್ಯರಾದ ಹಾಜಿ ಯೂಸುಫ್ ಉಸ್ಮಾನ್ ಕಳಂಜಿಬೈಲ್ ಅವರ 30 ವರ್ಷಗಳ ನಿಸ್ವಾರ್ಥ ಸಮಾಜ ಸೇವೆ ಹಾಗೂ ಡಿಕೆಎಸ್‌ಸಿಗಾಗಿ ನಡೆಸಿದ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿಕೆಎಸ್‌ಸಿ ಸೆಂಟ್ರಲ್ ಆರ್ಗನೈಸರ್ ಉಸ್ತಾದ್ ಅಬ್ದುರ್ರಶೀದ್ ಸಅದಿ ಪೂಂಗೋಡ್ ಅವರು ಸಂಘಟನಾ ತರಬೇತಿಯನ್ನು ನೀಡಿದರು.ಅಧ್ಯಕ್ಷೀಯ ಭಾಷಣದಲ್ಲಿ ಅಬ್ದುಲ್ ಅಝೀಝ್ ಕಾಟಿಪಳ್ಳ ಅವರು ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಡಿಕೆಎಸ್‌ಸಿ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.
ಗಣ್ಯರ ಉಪಸ್ಥಿತಿ: ಅಬ್ದುಲ್ ಗಫೂರ್ ಸಜಿಪ (ಸ್ಥಾಪಕ ಸದಸ್ಯರು, ಡಿಕೆಎಸ್‌ಸಿ)
ಸುಲೈಮಾನ್ ಮಿಲನ್ ಸೂರಿಂಜೆ (ಉಸ್ತುವಾರಿ, ಡಿಕೆಎಸ್‌ಸಿ ರಿಯಾದ್ ವಲಯ)ವಿವಿಧ ಘಟಕಗಳಿಂದ ಆಗಮಿಸಿದ ಪ್ರತಿನಿಧಿಗಳು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.ಡಿಕೆಎಸ್‌ಸಿ ರಿಯಾದ್ ಝೋನಲ್ ಡೆವೆಲಪ್ಮೆಂಟ್ ಚೇರ್ಮನ್ ಅಬ್ದುಲ್ ಅಝೀಝ್ ಬಜ್ಪೆ ಅವರು ಸಂಸ್ಥೆಯ ಮುಂದಿನ ಯೋಜನೆಗಳ ಕುರಿತು ವಿವರಿಸಿದರು.
ನೂತನ ಸಮಿತಿ ರಚನೆ (2026–27): ಚುನಾವಣಾಧಿಕಾರಿಗಳಾಗಿ ಡಿಕೆಎಸ್‌ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್, ಅಬ್ದುಲ್ ಗಫೂರ್ ಸಜಿಪ ಹಾಗೂ ಸುಲೈಮಾನ್ ಮಿಲನ್ ಸೂರಿಂಜೆ ಅವರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.
ಪದಾಧಿಕಾರಿಗಳು:
- ಅಧ್ಯಕ್ಷರು: ದಾವೂದ್ ಹಕೀಂ ಕಂದಕ್
- ಪ್ರಧಾನ ಕಾರ್ಯದರ್ಶಿ: ಇರ್ಫಾನ್ ಮೆಲ್ಕಾರ್
- ಹಣಕಾಸು ಕಾರ್ಯದರ್ಶಿ: ಹುಝೈಫ ಪೆರಾಜೆ
- ಡೆವೆಲಪ್ಮೆಂಟ್ ಚೆಯರ್ಮ್ಯಾನ್: ಅಬ್ದುಲ್ ಅಝೀಝ್ ಕಾಟಿಪಳ್ಳ.
- ಉಪಾಧ್ಯಕ್ಷರು: ಅಬ್ದುರ್ರಹ್ಮಾನ್ ಸುಲೈಮಾನ್ ಉಚ್ಚಿಲ, ಯೂಸುಫ್ ಹಾಜಿ ಕಳಂಜಿಬೈಲ್, ಕಾರ್ಯದರ್ಶಿಗಳು: ಶಾಹಿದ್ ಮೇದರಬೆಟ್ಟು, ಅಬ್ದುರ್ರಶೀದ್ ಕಕ್ಕಿಂಜೆ.
- ಸಂವಹನ ಕಾರ್ಯದರ್ಶಿ: ಅಬ್ದುಲ್ ಅಝೀಝ್ ಬಜ್ಪೆ.
- ಮುಖ್ಯ ಸಲಹೆಗಾರರು: ಅಬ್ದುಲ್ ಹಮೀದ್ ಉಸ್ತಾದ್ ಮೂಡಬಿದ್ರೆ
- ಸಲಹೆಗಾರರು: ಅಬ್ದುಲ್ ಖಾದರ್ ಕಣ್ಣಂಗಾರ್,
- ಮುಸ್ತಫಾ ಸಅದಿ,
- ನಝೀರ್ ಹಾಜಿ ಕಾಶಿಪಟ್ಣ
- ಲೆಕ್ಕ ಪರಿಶೋಧಕರು: ಇಸ್ಮಾಯೀಲ್ ಕಣ್ಣಂಗಾರ್.
- ಎಲ್ಲಾ ಯೂನಿಟ್ ಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿ ಹಾಗೂ 21 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ನೇಮಕ ಮಾಡಲಾಯಿತು.ನೂತನ ಅಧ್ಯಕ್ಷ ದಾವೂದ್ ಹಕೀಂ ಕಂದಕ್ ಅವರು ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಅಗತ್ಯವಿದ್ದು, ಹೆಚ್ಚಿನ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ತಿಳಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಮೆಲ್ಕಾರ್ ಅವರು ಧನ್ಯವಾದ ಸಲ್ಲಿಸಿದರು. ಅಬ್ದುರ್ರಹ್ಮಾನ್ ಸುಲೈಮಾನ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.






















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ