janadhvani

Kannada Online News Paper

ಉಪ್ಪಿನಂಗಡಿ ಪೋಲೀಸರ ಕ್ರೌರ್ಯ: ಮುಸ್ಲಿಮ್ ಒಕ್ಕೂಟ ಖಂಡನೆ- ಕೆ.ಅಶ್ರಫ್

ಮಂಗಳೂರು:ಉಪ್ಪಿನಂಗಡಿಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ನಿನ್ನೆ ಪಿ.ಎಫ್. ಐ.ಸಂಘಟನೆಯ ಮೂವರು ನಾಯಕರನ್ನು ವಿಚಾರಣೆ ನೆಪದಲ್ಲಿ ಬಂಧಿಸಿದ್ದನ್ನು ವಿರೋಧಿಸಿ ಮತ್ತು ಬಂಧಿತ ನಾಯಕರನ್ನು ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿ ಇಂದು ಸಂಘಟನೆಯ ಸದಸ್ಯರು ಉಪ್ಪಿನಂಗಡಿ ಪೊಲೀಸು ಸ್ಟೇಶನ್ ಎದುರಿಗೆ ಜಮಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಪೊಲೀಸರು ಅಪ್ರಚೋಧಿತವಾಗಿ ಪ್ರತಿಭಟನಾಕಾರರ ಮೇಲೆ ಅನ್ಯಾಯವಾಗಿ ಲಾಠಿ ಚಾರ್ಜ್ ಮಾಡಿದ್ದು, ಅಮಾಯಕ ಪ್ರತಿಭಟನಾಕಾರರು ಗಂಭೀರ ಗಾಯಗೊಂಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆತೂರ್ ಇಬ್ರಾಹಿಂ ತಂಙ್ಞಳ್ ರವರು ತೀವ್ರ ಗಾಯಗೊಂಡು ಗಂಭೀರಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಈ ದೌರ್ಜನ್ಯವು ಖಂಡನೀಯವಾಗಿದೆ.

ಪೊಲೀಸರು ಶಾಂತಿ ಕಾಪಾಡುವುದರ ಹೊರತು, ಹಿಂಸೆಯನ್ನು ಪ್ರಚೋದಿಸಿದ್ದಾರೆ. ಪೊಲೀಸರ ಈ ದೌರ್ಜನ್ಯವನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್.ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.