janadhvani

Kannada Online News Paper

ವಿವಾಹ ಸಂದರ್ಭ ವರನಿಂದ ಮಾರು ವೇಷ: ಧಾರ್ಮಿಕ ನಂಬಿಕೆಗೆ ಅವಹೇಳನ- ಮುಸ್ಲಿಮ್ ಒಕ್ಕೂಟ ಖಂಡನೆ

ಮಂಗಳೂರು: ಸಾಲೆತ್ತೂರು ವಿವಾಹ ಸಂದರ್ಭ ವಿವಾಹಿತ ವರ, ಪ್ರಾದೇಶಿಕ ಧಾರ್ಮಿಕ ನಂಬಿಕೆಯ ರೂಪಕದ ವೇಷ ಧರಿಸಿ, ನಿರ್ಧಿಷ್ಟ ಸಮುದಾಯದ ಜನಾಂಗ ಆರಾಧಿಸುವ ಸಂಕೇತವನ್ನು ಸಾಮಾನ್ಯ ರೀತಿಯಲ್ಲಿ ಅವಹೇಳಿಸುವ ರೀತಿಯಲ್ಲಿ ವರ್ಥಿಸಿರುವ ಕೃತ್ಯ ಖಂಡನೀಯ.

ಇಂತಹ ವರ್ತನೆ ಮುಸ್ಲಿಮ್ ಸಮುದಾಯದ ವಿವಾಹದ ಆಚರಣೆಗೆ ವಿರುದ್ಧವಾಗಿದೆ. ವಿವಾಹ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ಇಂತಹ ವರ್ತನೆ ಸಮರ್ಥಿಸುವಂತದ್ದಲ್ಲ. ಮತೀಯ ಸೂಕ್ಷ್ಮ ಪ್ರದೇಶಗಳಲ್ಲಿ ಕೃತ್ಯದಾರರ ಇಂತಹ ವರ್ತನೆ ಖಂಡನೀಯ.

ಒಂದು ನಿರ್ಧಿಷ್ಟ ಸಮುದಾಯದ ಧಾರ್ಮಿಕ ನಂಬಿಕೆಗೆ ಅವಮಾನ ಮಾಡಿದ ಈ ಕೃತ್ಯದ ವಿರುದ್ಧ ಪೊಲೀಸು ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ.

ಕೆ.ಅಶ್ರಫ್.
ಅಧ್ಯಕ್ಷರು. ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.