janadhvani

Kannada Online News Paper

ಎಸ್ಡಿಪಿಐ ಮಂಗಳೂರು(ಉಳ್ಳಾಲ)ವಿಧಾನಸಭಾ ಕ್ಷೇತ್ರ ಸಮಿತಿ: ನಾಯಕತ್ವ ತರಬೇತಿ ಶಿಬಿರ

ಕೊಣಾಜೆ, ನ.03: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ 2021-2024ರ ಅವಧಿಗೆ ಆಯ್ಕೆಯಾದ ಬೂತ್ ಸಮಿತಿ, ಗ್ರಾಮ ಸಮಿತಿ, ವಾರ್ಡ್ ಸಮಿತಿ , ಪಟ್ಟಣ ಸಮಿತಿ , ಬ್ಲಾಕ್ ಸಮಿತಿ, ಮತ್ತು ನಗರ ಸಮಿತಿ ನಾಯಕರಿಗೆ ತರಬೇತಿ ಕಾರ್ಯಾಗಾರ ಬೋಳಿಯಾರ್ ಸ್ವಾಗತ್ ಹಾಲ್ ನಲ್ಲಿ ನಿನ್ನೆ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರುಗಳಾದ ಅಕ್ರಂ ಹಸನ್, ಇಕ್ಬಾಲ್ ಬೆಳ್ಳಾರೆ, ಫಯಾಝ್ ದೊಡ್ಡಮನೆ, ಹಾಗೂ ಅಕ್ಬರ್ ಅಲಿ ರವರು ನಾಯಕತ್ವ ತರಬೇತಿ ನೀಡಿದರು.

ಈ ಸಂಧರ್ಭದಲ್ಲಿ ರಾಷ್ಟ್ರಾಧ್ಯಕ್ಷರ ಸಂದೇಶದ ವಿಡಿಯೋ ಮತ್ತು ದ.ಕ ಜಿಲ್ಲಾ ಡಾಕ್ಯುಮೆಂಟರಿ ವಿಡಿಯೋ ಪ್ರದರ್ಶನ ಮಾಡಲಾಯಿತು.

ಈ ಸಂದರ್ಭದಲ್ಲಿ ದ.ಕ. ಜಿಲ್ಲೆಯ SDPI ಪಕ್ಷದ ನೂತನ ಅಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಮತ್ತು ಕ್ಷೇತ್ರದಿಂದ ಜಿಲ್ಲಾ ಸಮಿತಿಗೆ ಆಯ್ಕೆಗೊಂಡ ಝಾಕಿರ್ ಉಳ್ಳಾಲ ಹಾಗು ಅಶ್ರಫ್ ಕೆ.ಸಿ.ರೋಡ್ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಾಹಿದ್ ಮಲಾರ್ ಸ್ವಾಗತಿಸಿದರೆ, ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಝಾಕಿರ್ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನಸಭಾ ಅಧ್ಯಕ್ಷ ಇರ್ಷಾದ್ ಅಜಿನಡ್ಕ ಸಮಾರೋಪಗೈದರು. ಕ್ಷೇತ್ರ
ಸಮಿತಿ ಸದಸ್ಯರಾದ ನೌಷಾದ್ ಕಲ್ಕಟ್ಟ , ಅಶ್ರಫ್ ಮಂಚಿ, ಅಬ್ಬಾಸ್ ಕಿನ್ಯ, ಅಬ್ದುಲ್ ಲತೀಫ್ ಕೋಡಿಜಾಲ್ , ಸುಹೈಲ್ ಉಳ್ಳಾಲ, ಝೈನುದ್ಧೀನ್ ಹರೇಕಳ, ಅಶ್ರಫ್ ಬೋಳಿಯಾರ್, ಮೊಹಿದ್ದೀನ್ ಅಜಿನಡ್ಡ್ಕ, ನವಾಝ್ ಸಜಿಪ, ಶಾಕಿರ್ ಮೊಂಟೆಪದವು, ಮುಂತಾದವರು ಉಪಸ್ಥಿತರಿದ್ದರು. ಅಲ್ಲದೇ ಚುನಾಯಿತ ಜನ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸಿದರು ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ರವರು
ಕಾರ್ಯಕ್ರಮದಲ್ಲಿ ಧನ್ಯವಾದಗೈದರು.

error: Content is protected !! Not allowed copy content from janadhvani.com