ಬೆಂಗಳೂರುಃ ಸುನ್ನೀ ಸಂಘಟನಾ ನಾಯಕರ ನಿಯೋಗವಿಂದು ಮುಖ್ಯಮಂತ್ರಿ ಸಿದ್ದರಾಮಯ್ಯುರನ್ನು ಭೇಟಿ ಮಾಡಿ ಮುಸ್ಲಿಂ ಸಮುದಾಯದ ವಿವಿಧ ಭೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಲಾಯಿತು.
ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ನಿಯೋಗ ಹಿಜಾಬ್,ಮೀಸಲಾತಿ,ಮಸೂದೆಯ ವಾಪಸಾತಿಗೆ ಬೇಕಾದ ಕಾನೂನಾತ್ಮಕ ಕ್ರಮ,ಜಾತಿಜನಗಣತಿಯ ಶೀಘ್ರ ಬಿಡುಗಡೆ,ಹುಬ್ಬಳ್ಳಿ ,ಡಿಜಿಹಳ್ಳಿ ಕೆಜಿಹಳ್ಳಿ,ಕರಾವಳಿ ಪ್ರದೇಶದಲ್ಲಿ ನಡೆದಂತಹ ಕೋಮುಗಲಭೆ ಮತ್ತು ಗುಂಪು ಹಿಂಸಾಚಾರದಲ್ಲಿ ವಿಚಾರಣೆ ಇಲ್ಲದೆ ಜೈಲಲ್ಲಿ ಕೊಳೆಯುತ್ತಿರುವ ಅಮಾಯಕರು ಯಾವುದೇ ಜಾತಿಯವರಾದರೂ ಶೀಘ್ರ ಬಿಡುಗಡೆ, ಮಂಗಳೂರು ಗೋಲಿಬಾರ್ ಸಂಧರ್ಭದಲ್ಲಿ ನೂರರಷ್ಟು ಅಮಾಯಕರ ಮೇಲೆ ದಾಖಲಾದ ಕೇಸುಗಳನ್ನು ಹಿಂತೆಗೆಯಲು,
ಚಿಕ್ಕಮಗಳೂರಿನ ಸರ್ವ ಜನರ ಸೌಹಾರ್ಧ ತಾಣವಾದ ಬಾಬಾಬುಡನ್ ಗಿರಿ ದರ್ಗಾ ಆಡಳಿತ ಸಮಿತಿಗೆ ಏಕಪಕ್ಷೀಯ ಆಯ್ಕೆಯನ್ನು ವಾಪಾಸು ಪಡೆದು ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸುವುದು,ಮುಂಬರುವ ಬಜೆಟ್ ನಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯಾ ಆಧಾರದಲ್ಲಿ ಅನುದಾನ ನೀಡುವುದು ಅಲ್ಲದೆ ಇತ್ತೀಚಿಗೆ ಬಾರೀ ಮುಸ್ಲಿಂ ಮಹಿಳೆಯರ ಬಗ್ಗೆ ಅಸಹ್ಯ ವಾಗಿ ಮಾತಾಡಿದ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ತೆಗೆದು ಬಂದಿಸಬೇಕು. ಮುಂತಾದ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಡಲಾಯ್ತು.
ಭೇಡಿಕೆಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದರು.
ನಂತರ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಬಿ ಕೆ ಹರಿಪ್ರಸಾದರನ್ನು ಭೇಟಿ ಮಾಡಿದ ನಿಯೋಗ ಮುಂದಿನ ಹೆಜ್ಜೆಯ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು.
ನಿಯೋಗದಲ್ಲಿ ರಾಜ್ಯ ವಕ್ಪ್ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಮೌಲಾನ ಶಾಫಿ ಸಅದಿ ಬೆಂಗಳೂರು, SჄS ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸ ಅದಿ ಕೊಡಗು, ಜಿಲ್ಲಾ ವಕ್ಪ್ ಅಧ್ಯಕ್ಷರಾದ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪ್ರಧಾನ ಕಾರ್ಯದರ್ಶಿ ಎಂ ಬಿ ಮುಹಮ್ಮದ್ ಸಾಧಿಕ್ ಮಲೆಬೆಟ್ಟು, ಸಮ್ಮೇಳನ ಸ್ವಾಗತ ಸಮಿತಿ ಕನ್ವೀನರ್ ಅಶ್ರಫ್ ಕಿನಾರ ಮಂಗಳೂರು, ಉಪಾಧ್ಯಕ್ಷ ಜೆಎಸ್ ಮುಹಮ್ಮದ್ ಅಲಿ ಸಕಲೇಶಪುರ, ಎಸ್ ವೈ ಎಸ್ ಕಾರ್ಯದರ್ಶಿ ಹಸೈನಾರ್ ಆನೆಮಹಲ್,ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ರಾಜ್ಯ ಸಮಿತಿ ಸದಸ್ಯರಾದ ನಾಸಿರ್ ಕ್ಲಾಸಿಕ್ ಬೆಂಗಳೂರು, ಇಬ್ರಾಹಿಮ್ ಸಖಾಫಿ ಪಯೊಟ ,ಇಸ್ಮಾಯಿಲ್ ಸಅದಿ ಕಿನ್ಯ, ಚಿಕ್ಕಮಗಳೂರು ವಕ್ಪ್ ಅಧ್ಯಕ್ಷ ಶಾಹಿದ್ ರಝ್ವಿ ,ಜುನೈದ್ ರಝ್ವಿ ಹಾಸನ ಉಪಸ್ಥಿತರಿದ್ದರು.